ಮಹಾರಾಷ್ಟ್ರ: ಜಿಬಿಎಸ್ ಕಾಯಿಲೆ ಐವರ ಸಾವು ಧೃಢಪಡಿಸಿ ಆರೋಗ್ಯ ಇಲಾಖೆ
ಮಹಾರಾಷ್ಟ್ರ: ಜಿಬಿಎಸ್ ಕಾಯಿಲೆ ಐವರ ಸಾವು ಧೃಢಪಡಿಸಿ ಆರೋಗ್ಯ ಇಲಾಖೆ
ಮುಂಬೈ: ಮಹಾರಾಷ್ಟ್ರ ರಾಜ್ಯದಲ್ಲಿ ಗುಯಿಲಿನ್-ಬಾರೆ ಸಿಂಡ್ರೋಮ್ (ಜಿಬಿಎಸ್) ಕಾಯಿಲೆಯಿಂದ ಐದು ಶಂಕಿತ ಸಾವು ಸಂಭವಿಸಿರುವುದಾಗಿ ಶನಿವಾರ ಇಲ್ಲಿನ ಆರೋಗ್ಯ ಇಲಾಖೆ ಅಧಿಕೃತವಾಗಿ ಹೇಳಿದೆ.
ಇಲಾಖೆಯ ವರದಿಯ ಪ್ರಕಾರ ಒಟ್ಟು 149 ಶಂಕಿತ ಜಿಬಿಎಸ್ ಪ್ರಕರಣಗಳು ವರದಿಯಾಗಿದ್ದು ಅವುಗಳ ಪೈಕಿ 124 ಪ್ರಕರಣಗಳು ದೃಢಪಟ್ಟಿವೆ.
ಹೆಚ್ಚಿನ ಪ್ರಕರಣಗಳು ಪುಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬಂದಿದ್ದು, ಕಲುಷಿತ ನೀರಿನ ಮೂಲಕ ರೋಗಾಣು ಹರಡಲು ಕಾರಣವೆಂದು ಅಂದಾಜಿಸಲಾಗಿದೆ. ಕಲುಷಿತ ಆಹಾರ ಮತ್ತು ನೀರಿನಲ್ಲಿ ‘ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ’ ಎಂಬ ಬ್ಯಾಕ್ಟೀರಿಯಾ ಕಾಣಿಸಿರುವುದಾಗಿ ವರದಿ ಹೇಳಿದೆ.