ನಾಳೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ: ಲೋಕಸಭಾ ಸಚಿವಾಲಯ
ನಾಳೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ: ಲೋಕಸಭಾ ಸಚಿವಾಲಯ
ನಾಳೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ನಡೆಯಲಿದೆ ಎಂದು ಲೋಕಸಭಾ ಸಚಿವಾಲಯದಿಂದ ವರದಿಯಾಗಿದೆ. ವಕ್ಫ್ ಮಸೂದೆಯನ್ನು ಪರಿಶೀಲಿಸುವ ಸಂಸತ್ತಿನ ಜಂಟಿ ಸಮಿತಿಯ ವರದಿಯನ್ನು ನಾಳೆ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ. ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಹಾಗೂ ಸದಸ್ಯ ಸಂಜಯ್ ಜೈಸ್ವಾಲ್ ನಾಳೆ ಲೋಕಸಭೆಯಲ್ಲಿ ವರದಿಯನ್ನು ಮಂಡಿಸಲಿದ್ದಾರೆ ಎಂದು ಲೋಕಸಭಾ ಸಚಿವಾಲಯ ಹೊರಡಿಸಿದ ಬುಲೆಟಿನ್ ನಲ್ಲಿ ತಿಳಿಸಿದೆ. ವಕ್ಫ್ ಮಸೂದೆಯ ಕುರಿತಾದ ಸಂಸತ್ತಿನ ಜಂಟಿ ಸಮಿತಿ ಕರಡು ಶಾಸನದ ವರದಿಯನ್ನು 15-11 ಬಹುಮತದ ಮತಗಳಿಂದ ಅಂಗೀಕರಿಸಿತು. ವಿರೋಧ ಪಕ್ಷದ ಸದಸ್ಯರು ವರದಿಗೆ ಭಿನ್ನಾಭಿಪ್ರಾಯ ಟಿಪ್ಪಣಿಗಳನ್ನು ಸಲ್ಲಿಸಿದರು.