ಉಡುಪಿ: ‘ಬಜೆಟ್ ಟೀಕಿಸುವ ಮೊದಲು ಕೇಂದ್ರದ ಯೋಜನೆಗಳನ್ನ ಜಾರಿಗೆ ತನ್ನಿ’- ರಾಜ್ಯ ಸರ್ಕಾರಕ್ಕೆ ಸಂಸದ ಕೋಟ ತಿರುಗೇಟು
ಉಡುಪಿ: ‘ಬಜೆಟ್ ಟೀಕಿಸುವ ಮೊದಲು ಕೇಂದ್ರದ ಯೋಜನೆಗಳನ್ನ ಜಾರಿಗೆ ತನ್ನಿ’- ರಾಜ್ಯ ಸರ್ಕಾರಕ್ಕೆ ಸಂಸದ ಕೋಟ ತಿರುಗೇಟು
ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ಉದ್ದೇಶಪೂರ್ವಕವಾಗಿ ರಾಜ್ಯದ ಆಡಳಿತ ಅಡ್ಡಿಪಡಿಸುತ್ತಿದೆ. ಕೇಂದ್ರ ಸರ್ಕಾರದ ಉಪಕ್ರಮಗಳನ್ನು ಜನರಿಗೆ ತಲುಪಿಸಲು ಸಹಕರಿಸಿ ಎಂದು ರಾಜ್ಯ ಸರ್ಕಾರಕ್ಕೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಒತ್ತಾಯಿಸಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನ ಟೀಕೆಗೆ ಪ್ರತಿಕ್ರಿಸಿದ ಅವರು, ಬಜೆಟ್‌ನಲ್ಲಿ ಯಾವ ಅಂಶವು ರಾಜ್ಯದ ಪ್ರಗತಿಗೆ ಅಡ್ಡಿಯಾಗಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಪ್ರತಿಪಕ್ಷಗಳಿಗೆ ಸವಾಲು ಹಾಕಿದರು. ಕರ್ನಾಟಕ ಕಾಂಗ್ರೆಸ್ ಸರ್ಕಾರವು ಕೇಂದ್ರದ ಯೋಜನೆಗಳನ್ನು ಸಕ್ರಿಯವಾಗಿ ತಡೆಯುತ್ತಿದೆ. ಉದಾಹರಣೆಗೆ, ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಕೇಂದ್ರ ಸರ್ಕಾರವು 6,000 ರೂ. ನೀಡುತ್ತದೆ. ಆದರೆ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 4,000 ರೂ. ನೀಡುತ್ತಿತ್ತು. ಈ ಮೂಲಕ ರೈತರಿಗೆ 10,000 ದೊರೆಯುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಈ 4,000 ರೂ. ಲಾಭವನ್ನು ರದ್ದುಪಡಿಸಿತು. ಇದರಿಂದ ರೈತರಿಗೆ ಅನ್ಯಾಯವಾಗಿದೆ. ಇದು ರೈತರಿಗೆ ಮಾಡುವ ದ್ರೋಹವಲ್ಲವೇ ಎಂದು ಪ್ರಶ್ನಿಸಿದರು.