“ಚೋಲಿ ಕೆ ಪೀಚೆ ಕ್ಯಾ ಹೈ” ಹಾಡಿಗೆ ನೃತ್ಯ ಮಾಡಿದ್ದಕ್ಕೆ ಮದುವೆ ರದ್ದುಗೊಳಿಸಿದ ವಧುವಿನ ತಂದೆ!
“ಚೋಲಿ ಕೆ ಪೀಚೆ ಕ್ಯಾ ಹೈ” ಹಾಡಿಗೆ ನೃತ್ಯ ಮಾಡಿದ್ದಕ್ಕೆ ಮದುವೆ ರದ್ದುಗೊಳಿಸಿದ ವಧುವಿನ ತಂದೆ!
ದೆಹಲಿ: ಮಾಧುರಿ ದೀಕ್ಷಿತ್ ಕುಣಿದಿರುವ ಚೋಲಿ ಕೆ ಪೀಚೆ ಕ್ಯಾ ಹೇ ಹಾಡು ತುಂಬಾನೇ ಜನಪ್ರಿಯ. ಈ ಹಾಡು ಕೇಳಿದರೆ ಡ್ಯಾನ್ಸ್ ಮಾಡಬೇಕು ಎನಿಸುತ್ತದೆ.
ಆದ್ರೆ, ದೆಹಲಿಯಲ್ಲಿ ವರನೊಬ್ಬ ಚೋಲಿ ಕೆ ಪೀಚೆ ಕ್ಯಾ ಹೇ ಹಾಡಿಗೆ ಜಬರ್ದಸ್ತ್ ಆಗಿ ಸ್ಟೆಪ್ ಹಾಕಿದ್ದಾನೆ. ಇದನ್ನು ನೋಡಿದ ವಧುವಿನ ತಂದೆ ಕೆರಳಿ ಕೆಂಡವಾಗಿ ಮದುವೆಯನ್ನೇ ರದ್ದುಗೊಳಿಸಿದ ಘಟನೆ ನಡೆದಿದೆ.
ವರನೊಬ್ಬ ತನ್ನ ಮದುವೆಯಲ್ಲಿ ಬಾಲಿವುಡ್ ಜನಪ್ರಿಯ ಸಂಗೀತಕ್ಕೆ ನೃತ್ಯ ಮಾಡುವ ನಿರ್ಧಾರವು ಮದುವೆ ಮುರಿದು ಬೀಳುವ ಹಂತಕ್ಕೆ ಬಂದಿದೆ. ಚೋಲಿ ಕೆ ಪೀಚೆ ಕ್ಯಾ ಹೈ ಹಾಡಿಗೆ ಡ್ಯಾನ್ಸ್ ಮಾಡುವಂತೆ ಸ್ನೇಹಿತರು ಒತ್ತಾಯಿಸಿದರು. ಇದರಂತೆ ವರನೂ ಕುಣಿದ. ಇದರಿಂದ ವಧುವಿನ ತಂದೆ ಮದುವೆ ಕ್ಯಾನ್ಸಲ್ ಮಾಡಿದ್ದಾರೆ.
ವರನು ತನ್ನ ಮೆರವಣಿಗೆಯೊಂದಿಗೆ ನವದೆಹಲಿಯ ಮದುವೆ ಮಂಟಪಕ್ಕೆ ಬಂದನು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಅವನ ಸ್ನೇಹಿತರು ಅವನನ್ನು ನೃತ್ಯ ಮಾಡಲು ಒತ್ತಾಯಿಸಿದರು, ಪ್ರಸಿದ್ಧ ಬಾಲಿವುಡ್ ನ ಖ್ಯಾತ ಹಾಡು ಶುರುವಾಗುತ್ತಿದ್ದಂತೆ ವರ ಹಾಗೂ ಆತನ ಸ್ನೇಹಿತರು ಸ್ಟೆಪ್ ಹಾಕಲು ಶುರು ಮಾಡಿದರು. ಮದುವೆಗೆ ಬಂದ ಕೆಲವರು ಹುರಿದುಂಬಿಸಿ ಡ್ಯಾನ್ಸ್ ಮಾಡಿದ್ರು. ಆದ್ರೆ, ವಧುವಿನ ತಂದೆಯ ಸಿಟ್ಟು ಹೆಚ್ಚಾಗುವಂತೆ ಮಾಡಿದೆ.
ವರ ಡ್ಯಾನ್ಸ್ ಮಾಡುವ ಮೂಲಕ ಕೌಟುಂಬಿಕ ಮೌಲ್ಯ ಕಾಪಾಡಿಲ್ಲ. ಸಂಪ್ರದಾಯಸ್ಥನ ರೀತಿ ನಡೆದುಕೊಂಡಿಲ್ಲ. ಕೌಟುಂಬಿಕ ಮೌಲ್ಯಗಳನ್ನು ಅಪಮಾನಗೊಳಿಸಿದ್ದಾನೆಂದು ಮದುವೆ ರದ್ದುಗೊಳಿಸಿದ್ದಾರೆ.
ವಧು ಕಣ್ಣೀರು ಹಾಕಿದರೂ, ವರ ತನ್ನ ತಂದೆಯೊಂದಿಗೆ ಮಾತನಾಡಲು ಪ್ರಯತ್ನಿಸಿದರೂ ಒಪ್ಪಿಲ್ಲ.ಇಂಥ ಮೋಜಿನ ಅಳಿಯ ಬೇಡ ಎಂದು ವಧುವಿನ ತಂದೆ ಹೇಳಿದ್ದಾರೆ. ವಧುವಿನ ಕುಟುಂಬಕ್ಕೆ ಹತ್ತಿರವಿರುವ ಮೂಲಗಳ ಪ್ರಕಾರ, ಮದುವೆಯನ್ನು ರದ್ದುಗೊಳಿಸಿದ ನಂತರ ಹುಡುಗಿಯತಂದೆ ಕೋಪ ಕಡಿಮೆ ಆಗಿಲ್ಲ.
ಘಟನೆಯ ಸುದ್ದಿಯು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ತ್ವರಿತವಾಗಿ ವೈರಲ್ ಆಗಿತ್ತು. ಪೋಸ್ಟ್‌ನಲ್ಲಿ ಸುದ್ದಿಪತ್ರಿಕೆಯ ಕ್ಲಿಪ್ಪಿಂಗ್ ಶೀರ್ಷಿಕೆಯೊಂದಿಗೆ ಸೇರಿದೆ: “ಅತಿಥಿಗಳನ್ನು ರಂಜಿಸಲು ವರನು ‘ಚೋಲಿ ಕೆ ಪೀಚೆ’ ನಲ್ಲಿ ನೃತ್ಯ ಮಾಡುತ್ತಾನೆ. ವಧುವಿನ ತಂದೆ ಮದುವೆಯನ್ನು ರದ್ದುಗೊಳಿಸುತ್ತಾನೆ” ಎಂದಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ಚಂದೌಲಿಯಲ್ಲಿ ವರನೊಬ್ಬ ಊಟ ಬಡಿಸಲು ವಿಳಂಬ ಮಾಡಿದ ಕಾರಣ ತನ್ನ ಮದುವೆಯನ್ನು ರದ್ದುಗೊಳಿಸಿದ್ದ. ಅದೇ ದಿನ, ಅವನು ತನ್ನ ಸೋದರ ಸಂಬಂಧಿಯನ್ನು ಮದುವೆಯಾಗಿದ್ದ. ವಧುವಿನ ಮನೆಯವರು ಪೊಲೀಸ್ ದೂರು ದಾಖಲಿಸಿದ್ದು, ಈಗಾಗಲೇ ಮಾಡಿಕೊಂಡಿದ್ದ ವ್ಯವಸ್ಥೆಗೆ 7 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಹೇಳಿದ್ದರು.