ಯಾದಗಿರಿ: ಭೀಕರ ವಾಹನ ಅಪಘಾತ, ಒಂದೇ ಕುಟುಂಬದ ಐವರು ಸಾವು
ಯಾದಗಿರಿ: ಭೀಕರ ವಾಹನ ಅಪಘಾತ, ಒಂದೇ ಕುಟುಂಬದ ಐವರು ಸಾವು
ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ತಿಂಥಣಿ ಬಳಿ ಭೀಕರ ವಾಹನ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೆಎಸ್ಆರ್‌ಟಿಸಿ ಬಸ್ಸೊಂದು ಬೈಕ್ ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ,ಗಂಭೀರವಾಗಿ ಗಾಯಗೊಂಡಿದ್ದ ಇನ್ನಿಬ್ಬರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.ಮೃತಪಟ್ಟವರನ್ನು ಒಂದೇ ಕುಟುಂಬದ
ಹನುಮಂತ(1), ಆಂಜನೇಯ(35), ಗಂಗಮ್ಮ (28),ಪವಿತ್ರ(5),ರಾಯಪ್ಪ(3) ಎಂದು ಗುರುತಿಸಲಾಗಿದೆ.