ಬಹುಮುಖ ಪ್ರತಿಭೆ ಐಶ್ಚರ್ಯ ರೈ ನೆಲ್ಯಾಡಿ ಯವರಿಗೆ ಸನ್ಮಾನ
ಬಹುಮುಖ ಪ್ರತಿಭೆ ಐಶ್ಚರ್ಯ ರೈ ನೆಲ್ಯಾಡಿ ಯವರಿಗೆ ಸನ್ಮಾನ
ಹೊಸಬೆಳಕು ಬಡವರ ಆಶಾಕಿರಣ ಆರ್ಲಪದವು(ರಿ) ಪುತ್ತೂರು ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಹಾಗೂ ಶ್ರೀ ಕೃಷ್ಣ ಯುವಕ ಮಂಡಲ (ರಿ) ಸಿಟಿಗುಡ್ಡೆ ಪುತ್ತೂರು ವತಿಯಿಂದ ಬಹುಮುಖ ಪ್ರತಿಭೆ ಐಶ್ಚರ್ಯ ರೈ ನೆಲ್ಯಾಡಿ ಯವರನ್ನು ಪುತ್ತೂರಿನ ಪ್ರಜ್ಞಾಶ್ರಮದಲ್ಲಿ ದಿನಾಂಕ 02…02..2025ರಂದು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪುತ್ತೂರು ನಗರ ಸಭಾ ಸದಸ್ಯರಾದ ಶ್ರೀ ದಿನೇಶ್ ಗೌಡ ಶೇವಿರೆ ಕಬಕ ಪ್ರೌಢಶಾಲೆ ಸಾಹಿತಿ ಶಿಕ್ಷಕಿ ಡಾ.ಶಾಂತಾ ಪುತ್ತೂರು ಮುಖ್ಯ ಅತಿಥಿಗಳಾಗಿದ್ದು,ಪ್ರಜ್ಞಾ ಆಶ್ರಮದ ಮೇಲ್ವಿಚಾರಕರಾದ ಅಣ್ಣಪ್ಪ ಜ್ಯೋತಿ ದಂಪತಿಗಳು, ಐಶ್ಚರ್ಯ ರೈ ಯವರ ತಂದೆ ಗುಣಾಧರ,ತಾಯಿ ಶ್ರೀಮತಿ ಅಶ್ವಿತಾ.ಕೆ.,ಅಜ್ಜಿ ಶ್ರೀಮತಿ ವಿಮಲ,ಸಹೋದರ ಅಕ್ಷಯ್, ಮತ್ತು ಆಶ್ರಮದ ಮಕ್ಕಳು ಉಪಸ್ಥಿತರಿದ್ದರು.ರಕ್ತಸಂಜೀವಿನಿ ಬ್ಲಡ್ ಗ್ರೂಪ್ ನ ಸಮಾಜಸೇವಕ ನವೀನ ಸಿಟಿಗುಡ್ಡೆ ಸ್ವಾಗತಿಸಿ,ಪ್ರಾಸ್ತಾವಿಕ ಮಾತುಗಳನ್ನಾಡಿದರು..ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.