• 19 ಮಾರ್ಚ್ 2025

ಮಂಗಳೂರಿನಲ್ಲಿ ನಿಗೂಢ ಪ್ರೇತ ಶಕ್ತಿಯ ಅಬ್ಬರ:ರಾತ್ರಿಯಾದರೆ ಸಾಕು ಬಟ್ಟೆಗೆ ಬೆಂಕಿ! ಪಾತ್ರೆಗಳು ಚೆಲ್ಲಾಪಿಲ್ಲಿ…

 ಮಂಗಳೂರಿನಲ್ಲಿ ನಿಗೂಢ ಪ್ರೇತ ಶಕ್ತಿಯ ಅಬ್ಬರ:ರಾತ್ರಿಯಾದರೆ ಸಾಕು ಬಟ್ಟೆಗೆ ಬೆಂಕಿ! ಪಾತ್ರೆಗಳು ಚೆಲ್ಲಾಪಿಲ್ಲಿ…
Digiqole Ad

ಮಂಗಳೂರಿನಲ್ಲಿ ನಿಗೂಢ ಪ್ರೇತ ಶಕ್ತಿಯ ಅಬ್ಬರ:ರಾತ್ರಿಯಾದರೆ ಸಾಕು ಬಟ್ಟೆಗೆ ಬೆಂಕಿ! ಪಾತ್ರೆಗಳು ಚೆಲ್ಲಾಪಿಲ್ಲಿ…

ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ನಿಗೂಢ ದುಷ್ಟ ಶಕ್ತಿಯ ಅಬ್ಬರದ ಬಗ್ಗೆ ತೀವ್ರ ಆತಂಕ ಮೂಡಿದ್ದು, ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದಲ್ಲಿ ಒಂದೇ ಕುಟುಂಬ ಭಯಭೀತ ಜೀವನ ಸಾಗಿಸುತ್ತಿದೆ. ಉಮೇಶ್ ಶೆಟ್ಟಿ ಎಂಬುವವರು ತಮ್ಮ ಕುಟುಂಬದೊಂದಿಗೆ ಕಳೆದ 18 ವರ್ಷಗಳಿಂದ ಈ ಮನೆಯಲ್ಲಿ ವಾಸಿಸುತ್ತಿದ್ದರೂ, ಕಳೆದ ಮೂರು ತಿಂಗಳಿನಿಂದ ಈ ಮನೆ ಅಪರಿಚಿತ ಶಕ್ತಿಯ ಕೇಂದ್ರವಾಗಿದೆ.

ಹೌದು,

ರಾತ್ರಿ ವೇಳೆ ಮನೆ ಒಳಗೆ ಅಸಹಜ ಘಟನೆಗಳು ನಡೆಯುತ್ತಿದ್ದು, ಮನೆಯ ಸದಸ್ಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಮಲಗಿದಾಗ ಯಾರೋ ಕುತ್ತಿಗೆ ಹಿಸುಕಿದ ಅನುಭವ, ಪಾತ್ರೆಗಳು ಅಪಾಯಕಾರಿ ರೀತಿಯಲ್ಲಿ ಚದುರುವುದು, ಮನೆಯೊಳಗೆ ಬಟ್ಟೆಗಳಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಳ್ಳುವುದು—ಈ ಅತೀಂದ್ರಿಯ ಅನುಭವಗಳು ಕುಟುಂಬವನ್ನು ಭೀತಿಗೀಡಾಗಿಸಿವೆ.

ಪ್ರೇತಾತ್ಮದ ಚಿತ್ರ ಸೆರೆಹಿಡಿದ ಕ್ಷಣ!

ಉಮೇಶ್ ಶೆಟ್ಟಿಯ ಪುತ್ರಿ ಕಗ್ಗತ್ತಲ ರಾತ್ರಿ ವೇಳೆ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದ ಫೋಟೋದಲ್ಲಿ ಬಿಳಿಯ ಮುಖ ಹೊಂದಿರುವ ಅಪರಿಚಿತ ವ್ಯಕ್ತಿಯ ಪ್ರತಿಬಿಂಬ ಸಿಕ್ಕಿದಂತಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಜನರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ನೆರೆಹೊರೆಯವರಿಗೂ ಅನುಭವಗೊಂಡ ಭಯಾನಕ ಘಟನೆಗಳು

ಈ ಪ್ರದೇಶದಲ್ಲಿ ಇಪ್ಪತೈದ್ದಕ್ಕೂ ಹೆಚ್ಚು ಮನೆಗಳಿದ್ದರೂ, ಈ ವಿಶೇಷ ಘಟನೆಗಳು ಉಮೇಶ್ ಶೆಟ್ಟಿ ಮನೆಯಲ್ಲಿಯೇ ಆಗುತ್ತಿವೆ. ನೆರೆಮನೆ ನಿವಾಸಿ ದೇವಕಿ ಅವರ ಪ್ರಕಾರ, ರಾತ್ರಿ ವೇಳೆ ಪಾತ್ರೆಗಳು ಧ್ವನಿಮಾಡುತ್ತವೆ ಮತ್ತು ವಿಚಿತ್ರ ಶಬ್ದಗಳು ಕೇಳಿಸುತ್ತವೆ. ಈ ನಿಗೂಢ ಬೆಳವಣಿಗೆಗಳಿಗೆ ಭಯಗೊಂಡ ಕುಟುಂಬ, ರಾತ್ರಿ ಹೊತ್ತೊಮ್ಮೆ ಮನೆಯಿಂದ ಹೊರಗಡೆ ನಿದ್ರಿಸುವಂತಹ ಪರಿಸ್ಥಿತಿ ಎದುರಿಸುತ್ತಿದೆ.

ಈ ಘಟನೆಗಳ ಬಗ್ಗೆ ಊರಿನ ಜನರು ಮತ್ತು ಸ್ಥಳೀಯರು ಕಾತುರದಿಂದ ಗಮನಹರಿಸುತ್ತಿದ್ದು, ಆಲೋಚನೆ ಮತ್ತು ಪರಿಹಾರಕ್ಕಾಗಿ ಹಲವರು ಮನೆಗೆ ಭೇಟಿ ನೀಡುತ್ತಿದ್ದಾರೆ. ಈ ಅತೀಂದ್ರಿಯ ಶಕ್ತಿಯ ಹಿಂದಿನ ನಿಜವಾದ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ…

— GFN ನ್ಯೂಸ್

Digiqole Ad

ಈ ಸುದ್ದಿಗಳನ್ನೂ ಓದಿ