ಮಹಾಕುಂಭ ಮೇಳ: ಸನಾತನ ಧರ್ಮ ಸ್ವೀಕರಿಸಿದ ವಿದೇಶಿಗರೆಷ್ಟು ಗೊತ್ತೇ?
ಮಹಾಕುಂಭ ಮೇಳ: ಸನಾತನ ಧರ್ಮ ಸ್ವೀಕರಿಸಿದ ವಿದೇಶಿಗರೆಷ್ಟು ಗೊತ್ತೇ?
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದ 61 ವಿದೇಶಿಯರು ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ.
ಕುಂಭ ನಗರದ ಸೆಕ್ಟರ್ 17ರಲ್ಲಿರುವ ಶಕ್ತಿಧಾಮ ಆಶ್ರಮದಲ್ಲಿ ವೇದ ಮಂತ್ರಗಳ ಪಠಣದ ನಡುವೆ ಜಗದ್ಗುರು ಸಾಯಿ ಮಾ ಲಕ್ಷ್ಮಿ ದೇವಿ ಅವರಿಂದ 61 ವಿದೇಶಿಯರೂ ಸನಾತನ ಧರ್ಮ ಸ್ವೀಕರಿಸಿದರು. ಅವರ ಮಾರ್ಗದರ್ಶನದಲ್ಲಿ ಇಲ್ಲಿಯವರೆಗೆ ಶಕ್ತಿಧಾಮ ಶಿಬಿರದಲ್ಲಿ ನಡೆದ ಈ ಪವಿತ್ರ ಮಹಾಕುಂಭ ಮೇಳದಲ್ಲಿ 200ಕ್ಕೂ ಹೆಚ್ಚು ವಿದೇಶಿಯರು ಸನಾತನ ದೀಕ್ಷೆಯನ್ನು ಸ್ವೀಕರಿಸಿದಂತಾಯಿತು.