ಬದಿಯಡ್ಕ ಕೃಷ್ಣ ಪೈ ಸ್ಮರಣಾಂಜಲಿ ಫೆ.9ರಂದು
ಬದಿಯಡ್ಕ ಕೃಷ್ಣ ಪೈ ಸ್ಮರಣಾಂಜಲಿ ಫೆ.9ರಂದು
ಬದಿಯಡ್ಕ: ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ನೇತೃತ್ವದಲ್ಲಿ ಚುಟುಕು ಕವಿ ದಿವಂಗತ ಬದಿಯಡ್ಕ ಕೃಷ್ಣ ಪೈ ಅವರ ಬದುಕು – ಬರಹದ ಬಗ್ಗೆ ಮೆಲುಕು ಹಾಕುವ ‘ಸ್ಮರಣಾಂಜಲಿ’ ಕಾರ್ಯಕ್ರಮವು 2025 ಫೆ.9ರಂದು ಅಪರಾಹ್ನ 2.30ರಿಂದ ಬದಿಯಡ್ಕದ ಗಣೇಶ್ ಪೈ ಅವರ ಮನೆಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ದಿವಂಗತ ಬಿ ಕೃಷ್ಣ ಪೈ ಅವರ ಭಾವಚಿತ್ರಕ್ಕೆ ಕುಟುಂಬದವರಿಂದ ಹಾಗೂ ಅಭಿಮಾನಿಗಳಿಂದ ಪುಷ್ಪಾರ್ಚನೆ ನಡೆಯಲಿದೆ. ನಿವೃತ್ತ ಪ್ರಾಂಶುಪಾಲ ಡಾ. ಬೇ. ಸೀ ಗೋಪಾಲಕೃಷ್ಣ ಭಟ್ ಸಂಸ್ಮರಣಾ ಭಾಷಣ ಮಾಡುವರು. ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ನಿವೃತ್ತ ಉಪ ಜಿಲ್ಲಾಧಿಕಾರಿ ಶಶಿಧರ ಶೆಟ್ಟಿ, ಖ್ಯಾತ ವೈದ್ಯ ಡಾ. ಶ್ರೀನಿಧಿ ಸರಳಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪರಿಷತ್ತಿನ ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಪ್ರಾಸ್ತಾವಿಕವಾಗಿ ಮಾತನಾಡುವರು. ನಿವೃತ್ತ ಪ್ರಾಧ್ಯಾಪಕ ಪ್ರೋ. ಎ ಶ್ರೀನಾಥ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಬಿ. ಉನ್ನತಿ ಪೈ, ಗಣೇಶ ಪೈ ಬದಿಯಡ್ಕ, ವಸಂತ ಕೆರೆಮನೆ ಭಾಗವಹಿಸುವರು. ಬಳಿಕ ಪರಿಷತ್ತಿನ ಜಿಲ್ಲಾಧ್ಯಕ್ಷ ಸಾಹಿತಿ ವಿರಾಜ್ ಅಡೂರು ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಲಿದೆ. ಕೆ. ನರಸಿಂಹ ಭಟ್ ಏತಡ್ಕ, ಶಾರದಾ ಮೊಳೆಯಾರ್ ಎಡನೀರು, ಪ್ರೋ. ಲತಾ ಪ್ರಕಾಶ್ ರಾವ್ ಬೆಳ್ಳೂರಡ್ಕ, ಶಶಿಕಲಾ ಟೀಚರ್ ಕುಂಬಳೆ, ಗಾಯತ್ರಿ ಪಳ್ಳತ್ತಡ್ಕ, ಶಾರದಾ ಭಟ್ ಕಾಡಮನೆ, ಕವನ, ಕವನ ಕೆ ಮೊದಲಾದವರು ಭಾಗವಹಿಸುವರು. ನಂತರ ಬದಿಯಡ್ಕದ ಲಕ್ಷ್ಮಿ ಜಿ ಪೈ ಮತ್ತು ತೇಜಸ್ ಪೈ ಬಳಗದವರಿಂದ ಗೀತಗಾಯನ ಕಾರ್ಯಕ್ರಮ ಜರುಗಲಿದೆ.