ಬೆಳ್ಳುಳ್ಳಿ ದರ ಕುಸಿತ ಈಗಿನ ದರ ಎಷ್ಟು ಗೊತ್ತೇ?
ಬೆಳ್ಳುಳ್ಳಿ ದರ ಕುಸಿತ ಈಗಿನ ದರ ಎಷ್ಟು ಗೊತ್ತೇ?
ಎರಡು ತಿಂಗಳ ಹಿಂದೆ ಗಗನಕ್ಕೇರಿದ್ದ ಬೆಳ್ಳುಳ್ಳಿ ದರ ಈಗ ಭಾರೀ ಕುಸಿತ ಕಂಡಿದೆ. ಕಳೆದ 3-4 ತಿಂಗಳಲ್ಲಿ ಗರಿಷ್ಠ 500 ರೂಪಾಯಿವರೆಗೂ ಏರಿಕೆ ಕಂಡಿದ್ದ ಪ್ರಥಮ ದರ್ಜೆ ಬೆಳ್ಳುಳ್ಳಿ ಗ್ರಾಹಕರ ನಿದ್ದೆಗೆಡಿಸಿತ್ತು. ಎರಡನೇ ದರ್ಜೆ ಬೆಳ್ಳುಳ್ಳಿ ಸಹ ಸರಾಸರಿ ಕೆಜಿಗೆ 400 ರೂಪಾಯಿ ತಲುಪಿತ್ತು.
ಈಗ ಮಾರುಕಟ್ಟೆಗೆ ಹೊಸ ಬೆಳ್ಳುಳ್ಳಿ ಧಾರಾಳವಾಗಿ ಬರುತ್ತಿದ್ದು ಬೆಳ್ಳುಳ್ಳಿ ದರ ಅರ್ಧಕ್ಕರ್ಧ ಕುಸಿದಿದೆ.
ಇದೀಗ ಮಾರುಕಟ್ಟೆಯಲ್ಲಿ ಪ್ರಥಮ ದರ್ಜೆ ಬೆಳ್ಳುಳ್ಳಿ ಕೆಜಿಗೆ 120-150 ರೂ. ಗೆ ಮಾರಾಟವಾಗುತ್ತಿದೆ. ಇನ್ನು ಎರಡನೇ , ಮೂರನೇ ದರ್ಜೆ ಬೆಳ್ಳುಳ್ಳಿ ಕೆಜಿಗೆ 70-90 ರೂ. ಗೆ ಮಾರಾಟವಾಗುತ್ತಿದೆ. ಬೆಳ್ಳುಳ್ಳಿ ದರ ಇಷ್ಟೂ ಕಡಿಮೆ ಕಂಡಿದ್ದು ಗ್ರಾಹಕರಿಗೆ ಸಂತಸ ತಂದಿದೆ.