ತುಮಕೂರು : ಡೆಂಗ್ಯೂ ಗೆ ಬಲಿಯಾದ 7 ವರ್ಷದ ಬಾಲಕ
ತುಮಕೂರು : ಡೆಂಗ್ಯೂ ಗೆ ಬಲಿಯಾದ 7 ವರ್ಷದ ಬಾಲಕ
ತುಮಕೂರು: ಕರ್ನಾಟಕ ರಾಜ್ಯದಲ್ಲಿ ವೈರಲ್ ಫಿವರ್ ಜೊತೆಗೆ ಇದೀಗ ಡೆಂಗ್ಯೂ ಜ್ವರ ಕೂಡ ಒಕ್ಕರಿಸಿಕೊಂಡಿದೆ.
ತುಮಕೂರು ಜಿಲ್ಲೆಯಲ್ಲಿ ಓರ್ವ ಬಾಲಕ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾನೆ.
ಹರೀಶ್ ಕುಮಾರ್ ಎನ್ನುವವರ ಪುತ್ರನಾದ ಕರುಣಾಕರ್(7) ಡೆಂಗ್ಯೂ ಜ್ವರದಿಂದ ಮೃತಪಟ್ಟ ಬಾಲಕ. ಪಾವಗಡದ ಸುಧಾ ಕ್ಲಿನಿಕ್ ನಲ್ಲಿ ಬಾಲಕ ಕಳೆದ ಎಂಟು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಕೊನೆಯ ಕ್ಷಣದವರೆಗೂ ಡೆಂಗ್ಯೂ ಜ್ವರ ಎಂದು ವೈದ್ಯರು ಬಾಲಕನ ಪೋಷಕರಿಗೆ ತಿಳಿಸಿರಲಿಲ್ಲ. ಹೀಗಾಗಿ ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ