ಕಡಬ: ಐತ್ತೂರು ಹಿರಿಯ ಪ್ರಾಥಮಿಕ ಶಾಲೆಗೆ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯಿಂದ ಡೆಸ್ಕ್ ಬೆಂಚು ವಿತರಣೆ..
ಕಡಬ: ಐತ್ತೂರು ಹಿರಿಯ ಪ್ರಾಥಮಿಕ ಶಾಲೆಗೆ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯಿಂದ ಡೆಸ್ಕ್ ಬೆಂಚು ವಿತರಣೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಐತ್ತೂರು ಸುಂಕದಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಐದು ಜೊತೆ ಬೆಂಚು, ಡೆಸ್ಕ್ ಗಳನ್ನು ವಿತರಿಸಲಾಯಿತು.
ಬಿಳಿನೆಲೆ ವಲಯ ಮೇಲ್ವಿಚಾರಕರಾದ ರವಿಪ್ರಸಾದ್ ಆಲಾಜೆ ರವರು ಶಾಲಾಭಿವೃದ್ಧಿ ಸಮಿತಿಯವರಿಗೆ ಹಸ್ತಾಂತರಿಸಿ ಮಾತನಾಡಿ ಧರ್ಮಸ್ಥಳ ಯೋಜನೆಯಿಂದ ಬಿಳಿನೆಲೆ ವಲಯದ ಆರು ಶಾಲೆಗಳಿಗೆ ಡೆಸ್ಕ್ ಬೆಂಚ್ ಗಳನ್ನು ವಿತರಿಸಲಾಗಿದ್ದು ಮಕ್ಕಳ ವಿದ್ಯಾರ್ಜನೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ದೊರೆತಂತಾಯಿತು. ಗುಣಮಟ್ಟದ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಆಸನದ ವ್ಯವಸ್ಥೆಯೂ ಬಹುಮುಖ್ಯವಾಗಿದೆ. ಶಾಲಾಭಿವೃಧ್ಧಿ ಸಮಿತಿ ಹಾಗೂ ಶಿಕ್ಷಕ ವೃಂದವರು ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಒಕ್ಕೂಟದ ಸಭೆ ಸಮಾರಂಭ ಗಳಿಗೆ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಸ್ಥಳವಕಾಶವನ್ನು ನೀಡುವುದರ ಜೊತೆಗೆ ಗ್ರಾಮದ ಅಭಿವಧ್ಧಿಗೆ ಪರೋಕ್ಷವಾಗಿ ಸಹಕಾರ ನೀಡಿದಂತಾಗಿದೆ. ಸಂಸ್ಥೆಗೆ ಇನ್ನಷ್ಟು ಸಹಾಯವನ್ನು ಶ್ರೀ ಕ್ಷೇತ್ರದಿಂದ ಪಡೆಯುವಲ್ಲಿ ಇದು ಪೂರಕವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸದಸ್ಯರಾದ ಆಜೀಜ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಐತ್ತೂರು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ಯಾಮಲಾ ಕೆ, ಐತ್ತೂರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಗಣೇಶ್ ಬಿ ಒಕ್ಕೂಟದ ಸದಸ್ಯರಾದ ಗಿರಿಜಾ ಕೆ, ಉಮಾವತಿ ಕೆ, ದೀಕ್ಷಿತಾ ಮುಜೂರು, ತನಿಯಪ್ಪ ಪೂಜಾರಿ ,ಶಾಲೆಯ ಶಿಕ್ಷಕರಾದ ವಿಗ್ನೇಶ್,ನಿತ್ಯ,ಪೂರ್ಣಿಮಾ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಇಸ್ಮಾಯಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಸುಜಾತಾ ಕೆ ಸ್ವಾಗತಿಸಿದರು. ಶಿಕ್ಷಕಿ ಸುಂದರಿ.ಎ ರವರು ವಂದಿಸಿದರು.