• 19 ಮಾರ್ಚ್ 2025

ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದಾರಿ ಸೂಚಕ ನಾಮ ಫಲಕ ಅನಾವರಣ

 ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದಾರಿ ಸೂಚಕ ನಾಮ ಫಲಕ ಅನಾವರಣ
Digiqole Ad

ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದಾರಿ ಸೂಚಕ ನಾಮ ಫಲಕ ಅನಾವರಣ

ಸವಣೂರು – ಬೆಳ್ಳಾರೆ ರಸ್ತೆಯ ಪರಣೆಯಲ್ಲಿ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ದಾರಿ ಸೂಚಿಸುವ ನಾಮ ಫಲಕವನ್ನು ಅನಾವರಣ ಮಾಡಲಾಯಿತು. ಅರ್ಚಕರಾದ ಗೋಪಾಲಕೃಷ್ಣ ಬಡೆಕಿಲ್ಲಾಯರವರ ಕೊಡುಗೆಯಾಗಿರುವ ಈ ನಾಮ ಫಲಕ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ನಾಮ ಫಲಕ ಲೋಕಾರ್ಪಣಾ ಸಂದರ್ಭದಲ್ಲಿ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಸಮಿತಿಯ ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಸವಣೂರು ಗ್ರಾಮ ದೈವ ಶಿರಾಡಿ‌ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪೂರ್ವಾಧ್ಯಕ್ಷ ಪ್ರಜ್ವಲ್ ಕೆ.ಆರ್.ಕೋಡಿಬೈಲು, ಸವಣೂರು ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಅಂಗಡಿಮೂಲೆ, ಮಾಜಿ‌ ಸದಸ್ಯ ಸತೀಶ್ ಬಲ್ಯಾಯ ಕನ್ನಡ ಕುಮೇರು, ನ್ಯಾಯವಾದಿ ಮಹಾಬಲ ಶೆಟ್ಟಿ ಕೊಮ್ಮಂಡ , ಜೋಗಿ ಬೇರಿಕೆ, ಸುಂದರ ಶೆಟ್ಟಿ ಬರೆಮೇಲುರವರುಗಳು ಉಪಸ್ಥಿತರಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ