ದೆಹಲಿ ವಿಧಾನ ಸಭಾ ಚುನಾವಣೆ ಗೆಲುವು; ಸುಳ್ಯದಲ್ಲಿ ಬಿಜೆಪಿ ವಿಜಯೋತ್ಸವ
ದೆಹಲಿ ವಿಧಾನ ಸಭಾ ಚುನಾವಣೆ ಗೆಲುವು; ಸುಳ್ಯದಲ್ಲಿ ಬಿಜೆಪಿ ವಿಜಯೋತ್ಸವ
ಸುಳ್ಯ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿ ಅಧಿಕಾರಕ್ಕೆ ಏರಿರುವ ಹಿನ್ನಲೆಯಲ್ಲಿ ಬಿಜೆಪಿ ಮಂಡಲ ಸಮಿತಿ ವತಿಯಿಂದ ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ ವಿಜಯೋತ್ಸವವಿಜಯೋತ್ಸವ ಆಚರಿಸಿತು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ ರಾಷ್ಟ್ರ ರಾಜಧಾನಿಯಲ್ಲಿ ಗೆಲುವು ಸಾಧಿಸಿರುವುದು ಮುಂದಿನ ಎಲ್ಲಾ ಚುನಾವಣೆಗಳಿಗೆ ದಿಕ್ಕೂಚಿ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಬಿಜೆಪಿ ಮೇಲೆ ಜನರಿಗೆ ವಿಶ್ವಾಸ ಹೆಚ್ಚಿದೆ ಎಂಬುದಕ್ಕೆ ಉದಾಹರಣೆ ಎಂದು ಹೇಳಿದರು. ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಅಭಿವೃದ್ಧಿ ಮಾಡುತ್ತಿರುವುದಕ್ಕೆ ನೀಡಿದ ಮತ ಎಂದು ಹೇಳಿದರು. ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಎ.ವಿ. ತೀರ್ಥರಾಮ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ರಾಕೇಶ್ ರೈ ಕೆಡೆಂಜಿ, ಸುಬೋದ್ ಶೆಟ್ಟಿ ಮೇನಾಲ, ಕುಸುಮಾಧರ ಎ.ಟಿ, ಆಶಾ ತಿಮ್ಮಪ್ಪ, ಆರ್.ಕೆ.ಭಟ್ ಕುರುಂಬಡೇಲು, ಶ್ರೀನಾಥ್ ರೈ ಬಾಳಿಲ, ಬುದ್ಧ ನಾಯ್ಕ, ವಿನಯಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ನಾರಾಯಣ ಎಸ್.ಎಂ, ಪುಷ್ಪಾ ಮೇದಪ್ಪ, ಅನೂಪ್ ಬಿಳಿಮಲೆ, ಹರೀಶ್ ಬೂಡುಪನ್ನೆ, ವಿಜಯ ಆಲಡ್ಕ, ಶ್ರೀಕಾಂತ್ ಮಾವಿನಕಟ್ಟೆ, ಸುನಿಲ್ ಕೇರ್ಪಳ, ಪ್ರದೀಪ್ ಕೊಲ್ಲರಮೂಲೆ, ಶಂಕರಲಿಂಗಂ ತೊಡಿಕಾನ, ಸುದರ್ಶನ ಪಾತಿಕಲ್ಲು, ದೀರೇಶ್ ನಡುಬೈಲು, ಪ್ರಸಾದ್ ಕಾಟೂರು, ಹೇಮಂತ ಮಠ, ಅಶೋಕ್ ಅಡ್ಯಾರ್, ಅನಿಲ್ ಕೆ.ಸಿ., ದಿನೇಶ್ ನಾಯರ್, ಜಗನ್ನಾಥ ಜಯನಗರ, ಶಂಕರ್ ಪೆರಾಜೆ, ಅವಿನಾಶ್ ಕುರುಂಜಿ ಉಪಸ್ಥಿತರಿದ್ದರು.