ನಮ್ಮ ಮೆಟ್ರೋ – ಪ್ರಯಾಣ ದರ ಏರಿಕೆ: ಇಂದಿನಿಂದಲೇ ಜಾರಿ
ನಮ್ಮ ಮೆಟ್ರೋ – ಪ್ರಯಾಣ ದರ ಏರಿಕೆ: ಇಂದಿನಿಂದಲೇ ಜಾರಿ
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರವು ಇಂದಿನಿಂದ ಏರಿಕೆಯಾಗಿದ್ದು, ಈ ಬಗ್ಗೆ BMRCL ಅಧಿಕೃತ ಆದೇಶ ಪ್ರಕಟಿಸಿದೆ. ಇನ್ಮುಂದೆ ಪ್ರಯಾಣ ದರ ಕನಿಷ್ಠ 10 ರೂಪಾಯಿಯಿಂದ 90 ರೂಪಾಯಿವರೆಗೆ ಇರಲಿದೆ. ಎಂಟು ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ಪ್ರಯಾಣ ದರ ಏರಿಕೆಯಾಗಿದೆ. ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬರಲಿದೆ.
2017ರಲ್ಲಿ 10% – 15% ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿಯು ದೇಶದ ಇತರ ರಾಜ್ಯಗಳು,ಸಿಂಗಾಪುರದ ಮೆಟ್ರೋ ಪರಿಷ್ಕರಣಿ ಕ್ರಮವನ್ನು ಅಧ್ಯಯನ ಮಾಡಿ ದರ ಪರಿಷ್ಕರಣೆ ಮಾಡಿದೆ.