ಇನ್ಮುಂದೆ ರಾಜ್ಯದಲ್ಲಿ ಸರಕಾರಿ ಉದ್ಯೋಗಗಳ ಪರೀಕ್ಷೆಗೆ ನೀಲಿ ಪೆನ್ನು ಕಡ್ಡಾಯ: KPSC ಆದೇಶ
ಇನ್ಮುಂದೆ ರಾಜ್ಯದಲ್ಲಿ ಸರಕಾರಿ ಉದ್ಯೋಗಗಳ ಪರೀಕ್ಷೆಗೆ ನೀಲಿ ಪೆನ್ನು ಕಡ್ಡಾಯ: KPSC ಆದೇಶ
ಬೆಂಗಳೂರು : ರಾಜ್ಯದಲ್ಲಿ ಇನ್ನು ಮುಂದೆ ಸರಕಾರಿ ಉದ್ಯೋಗಕ್ಕಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ KPSC ಮಹತ್ವದ ಆದೇಶವನ್ನು ಹೊರಡಿಸಿದ್ದು, ಈ ಮೂಲಕ ನೀಲಿ ಪೆನ್ನು ಬಳಕೆ ಕಡ್ಡಾಯಗೊಳಿಸಿದೆ. ಇನ್ಮುಂದೆ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ನು ಮಾತ್ರ ಬಳಸಬೇಕು.
ಕೆಪಿಎಸ್‌ಸಿ ವ್ಯಾಪ್ತಿಯ ಎಲ್ಲಾ ಪರೀಕ್ಷೆಗಳನ್ನು ನೀಲಿ ಬಣ್ಣದ ಪೆನ್ನಿನಲ್ಲಿಯೇ ಬರೆಯಬೇಕು ಎಂದು ಸೂಚಿಸಿದೆ.
ಫೆಬ್ರವರಿ 16 ರಿಂದ ನಡೆಯುವ ಎಲ್ಲಾ ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ನೀಲಿ ಬಣ್ಣದ ಪೆನ್ನು ಕಡ್ಡಾಯ. ಅದೇ ರೀತಿ ಕಪ್ಪು ಬಣ್ಣದ ಪೆನ್ನನ್ನು ಬಳಸದಂತೆ ತಿಳಿಸಿದೆ.