ಮಹಾಕುಂಭಮೇಳ: 3 ದಿನಗಳ ಕಾಲ ಅಂತಾರಾಷ್ಟ್ರೀಯ ಪಕ್ಷಿ ಉತ್ಸವ
ಮಹಾಕುಂಭಮೇಳ: 3 ದಿನಗಳ ಕಾಲ ಅಂತಾರಾಷ್ಟ್ರೀಯ ಪಕ್ಷಿ ಉತ್ಸವ
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಫೆ.16 ರಿಂದ 18 ರವರೆಗೆ ಅಂತಾರಾಷ್ಟ್ರೀಯ ಪಕ್ಷಿ ಉತ್ಸವವನ್ನು ಆಯೋಜಿಸಲಾಗಿದೆ.
ಇಲ್ಲಿ 200 ಜಾತಿಯ ಪಕ್ಷಿಗಳು ಇರಲಿವೆ. ಅದೇ ರೀತಿ ಪಕ್ಷಿಗಳ ಚಿತ್ರ ಬಿಡಿಸುವವರಿಗೆ 21 ಲಕ್ಷ ರೂ.ಗಳವರೆಗೆ ಬಹುಮಾನ ನೀಡಲಾಗುವುದು.
ಮಂಗೋಲಿಯಾ, ಸೈಬೀರಿಯಾ ಮತ್ತು ಅಫ್ಘಾನಿಸ್ಥಾನ ಸೇರಿದಂತೆ 10 ಕ್ಕೂ ಹೆಚ್ಚು ದೇಶಗಳ ಸೈಬೀರಿಯನ್ ಪಕ್ಷಿಗಳು ಮಹಾಕುಂಭದಲ್ಲಿ ಇರಲಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸೂಚನೆಯ ಮೇರೆಗೆ ಭಕ್ತರಿಗಾಗಿ ವಿಶೇಷ ಪರಿಸರ ಪ್ರವಾಸೋದ್ಯಮ ಯೋಜನೆಯನ್ನು ಸಿದ್ಧಪಡಿಸಲಾಗಿದೆ