ಭಾರತದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ಶಕ್ತಿಶಾಲಿ ಹೈಡ್ರೋಜನ್ ರೈಲು: ಸದ್ಯದಲ್ಲೇ ಸಂಚಾರ ಆರಂಭ
ಭಾರತದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ಶಕ್ತಿಶಾಲಿ ಹೈಡ್ರೋಜನ್ ರೈಲು: ಸದ್ಯದಲ್ಲೇ ಸಂಚಾರ ಆರಂಭ
ಭಾರತೀಯ ರೈಲ್ವೆಯಿಂದ ವಿಶ್ವದಲ್ಲೇ ಅತಿ ಉದ್ದದ ಮತ್ತು ಅತಿ ಶಕ್ತಿಶಾಲಿ ಎನಿಸುವ ಹೈಡ್ರೋಜನ್ ರೈಲು ಸಿದ್ಧವಾಗುತ್ತಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ರೈಲುಗಳನ್ನು ನಿರ್ಮಿಸಲಾಗುತ್ತಿದ್ದು ಸದ್ಯದಲ್ಲೇ ಇದರ ಸಂಚಾರ ಆರಂಭಗೊಳ್ಳಲಿದೆ.
ಕೇಂದ್ರ ರೈಲ್ವೆ ಸಚಿವ ಡಾ. ಅಶ್ವಿನಿ ವೈಷ್ಣವ್ ಈ ಕುರಿತು ವಾರಾಂತ್ಯದಲ್ಲಿ ರಾಜ್ಯಸಭೆಗೆ ಲಿಖಿತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ರೈಲು ಸಂಪೂರ್ಣ ಮಾಲಿನ್ಯರಹಿತ ಸಂಚಾರ ವಾಹನವಾಗಿದೆ.
ಜಿಂದ್ ಮತ್ತು ಸೋನೆಪತ್ ಸೆಕ್ಷನ್ ನ 89 ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಭಾರತದ ಮೊದಲ ಹೈಡ್ರೋಜನ್ ರೈಲು ಪ್ರಾಯೋಗಿಕವಾಗಿ ಸಂಚರಿಸಲಿದೆ.