• 19 ಮಾರ್ಚ್ 2025

ಐಫೋನ್ ರಫ್ತು – ಹೊಸ ದಾಖಲೆ, 10 ತಿಂಗಳಲ್ಲಿ 1 ಲಕ್ಷ ಕೋಟಿ ರೂ.

 ಐಫೋನ್ ರಫ್ತು – ಹೊಸ ದಾಖಲೆ, 10 ತಿಂಗಳಲ್ಲಿ 1 ಲಕ್ಷ ಕೋಟಿ ರೂ.
Digiqole Ad

ಐಫೋನ್ ರಫ್ತು – ಹೊಸ ದಾಖಲೆ, 10 ತಿಂಗಳಲ್ಲಿ 1 ಲಕ್ಷ ಕೋಟಿ ರೂ.

ಭಾರತದಲ್ಲಿ ಆ್ಯಪಲ್ ಕಂಪನಿಯ ಐಫೋನ್ ತಯಾರಿಕೆ ಕಾರ್ಯವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೆಲವು ವರ್ಷಗಳ ಹಿಂದೆ ಚೀನಾದಲ್ಲಿ ಬಹುತೇಕ ಐಫೋನ್ ತಯಾರಿಕೆ ನಡೆಯುತ್ತಿತ್ತು. ಇದೀಗ ಭಾರತದಲ್ಲಿ ಉತ್ಪಾದನೆ ಹೆಚ್ಚಿಸಲಾಗುತ್ತಿದೆ. ಭಾರತದಲ್ಲಿ ತಯಾರಾದ ಐಫೋನ್ ಗಳನ್ನು ವಿಶ್ವದ ಹಲವು ದೇಶಗಳಿಗೆ ರಫ್ತು ಕೂಡ ಮಾಡಲಾಗುತ್ತಿದೆ.

2024-25ರ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲೇ 1 ಲಕ್ಷ ಕೋಟಿ ರೂ. ಮೌಲ್ಯದ ಐಫೋನ್ ಗಳನ್ನು ರಫ್ತು ಮಾಡಲಾಗಿದೆ.

ಯಾವುದೇ ಹಣಕಾಸು ವರ್ಷದಲ್ಲೂ ಐಫೋನ್ ರಫ್ತು ಈ ಮೈಲಿಗಲ್ಲು ಮುಟ್ಟಿರಲಿಲ್ಲ, ಇದೊಂದು ಹೊಸ ದಾಖಲೆಯಾಗಿದೆ.

Digiqole Ad

ಈ ಸುದ್ದಿಗಳನ್ನೂ ಓದಿ