ಆರೋಗ್ಯ ಕ್ಷೇತ್ರಕ್ಕೂ ಕಾಲಿಟ್ಟ ಅದಾನಿ ಗ್ರೂಪ್
ಆರೋಗ್ಯ ಕ್ಷೇತ್ರಕ್ಕೂ ಕಾಲಿಟ್ಟ ಅದಾನಿ ಗ್ರೂಪ್
ಸಿಮೆಂಟ್, ಗ್ಯಾಸ್, ವಿಮಾನಯಾನ ಸೇರಿ ಹಲವಾರು ಕ್ಷೇತ್ರಗಳಲ್ಲಿ ಉದ್ಯಮ ಸ್ಥಾಪಿಸಿರುವ ಅದಾನಿ ಗ್ರೂಪ್ ಇದೀಗ ಆರೋಗ್ಯ ಕ್ಷೇತ್ರಕ್ಕೂ ಕಾಲಿಡುತ್ತಿದೆ.
ಅದಾನಿ ಗ್ರೂಪ್ ನ ಮುಖ್ಯಸ್ಥ ಗೌತಮ್ ಅದಾನಿ ಈ ವಿಷಯ ತಿಳಿಸಿದ್ದಾರೆ.
ಮಾಯೊ ಕ್ಲಿನಿಕ್ ಪಾಲುದಾರಿಕೆಯಲ್ಲಿ ವಿಶ್ವ ದರ್ಜೆ ವೈದ್ಯ ಸಂಶೋಧನೆ, ಕೈಗೆಟಕುವ ದರದ ಆರೋಗ್ಯ ಸೇವೆ ಮತ್ತು ವೈದ್ಯ ಶಿಕ್ಷಣ ನೀಡಲು ಅದಾನಿ ಹೆಲ್ತ್ ಸಿಟಿ ಪ್ರಾರಂಭಿಸಲಾಗುತ್ತಿದೆ.
ಮುಂಬೈ ಮತ್ತು ಅಹಮ್ಮದಾಬಾದ್ ನಲ್ಲಿ 1000 ಹಾಸಿಗೆಗಳ ಆಸ್ಪತ್ರೆ ಮತ್ತು ವೈದ್ಯ ಕಾಲೇಜು ಪ್ರಾರಂಭಿಸಲಾಗುವುದು.
ಆರೋಗ್ಯಕರ ಮತ್ತು ಬಲಿಷ್ಠ ಭಾರತಕ್ಕೆ ಇದು ಆರಂಭ ಎಂದಿದ್ದಾರೆ.