ಬ್ರೆಜಿಲ್ ನಲ್ಲಿ 40 ಕೋಟಿ ರೂ. ಗೆ ಮಾರಾಟವಾದ ಭಾರತ ಮೂಲದ ಹಸು
ಬ್ರೆಜಿಲ್ ನಲ್ಲಿ 40 ಕೋಟಿ ರೂ. ಗೆ ಮಾರಾಟವಾದ ಭಾರತ ಮೂಲದ ಹಸು
ಬ್ರೆಜಿಲ್ ನ ಮಿನಾಸ್ ಗೆರೈಸ್ ನಲ್ಲಿ ನಡೆದ ಹರಾಜಿನಲ್ಲಿ ವಯಾಟಿನಾ-19 ಎಂಬ ಆಂಧ್ರ ಪ್ರದೇಶದ ನೆಲ್ಲೂರು ತಳಿಯ ಹಸು ಬರೋಬ್ಬರಿ 40 ಕೋಟಿ ರೂ. ಗೆ ಮಾರಾಟವಾಗಿ ಇದೀಗ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದೆ.
ಈ ಹಸುವಿನ ತೂಕ 1,101 ಕಿಲೋಗ್ರಾಂ ಇದೆ. ಇದು ಅದೇ ತಳಿಯ ಯಾವುದೇ ಇತರ ಹಸುವಿನ ಸರಾಸರಿ ತೂಕಕ್ಕಿಂತ ಎರಡು ಪಟ್ಟು ಹೆಚ್ಚು.
ಹಾಗಾಗಿಯೇ ವಯಾಟಿನಾ-19 ಅತ್ಯಂತ ದುಬಾರಿಯಾಗಿ ಮಾರಾಟವಾದ ಹಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
‘ಚಾಂಪಿಯನ್ಸ್ ಆಫ್ ದಿ ವರ್ಲ್ಡ್ ‘ ಎಂಬ ಪ್ರತಿಷ್ಠಿತ ಸ್ಪರ್ಧೆಯಲ್ಲಿ ‘ಮಿಸ್ ಸೌತ್ ಅಮೇರಿಕಾ’ ಎಂಬ ಬಿರುದನ್ನು ಕೂಡ ಹೊಂದಿದೆ.