ವೀಸಾ ಇಲ್ಲದೆ ಭಾರತವನ್ನು ಪ್ರವೇಶಿಸುವ ವಿದೇಶಿಯರಿಗೆ ಭಾರೀ ದಂಡ ವಿಧಿಸಲು ಭಾರತ ಚಿಂತನೆ
ವೀಸಾ ಇಲ್ಲದೆ ಭಾರತವನ್ನು ಪ್ರವೇಶಿಸುವ ವಿದೇಶಿಯರಿಗೆ ಭಾರೀ ದಂಡ ವಿಧಿಸಲು ಭಾರತ ಚಿಂತನೆ
ಅಕ್ರಮ ವಲಸೆಗಾರರ ಮೇಲೆ ಭಾರೀ ದಂಡ ವಿಧಿಸಲು ಭಾರತ ಚಿಂತನೆ ನಡೆಸಿದೆ.
ವೀಸಾ ಇಲ್ಲದೆ ಭಾರತವನ್ನು ಪ್ರವೇಶಿಸುವ ವಿದೇಶಿಯರಿಗೆ 5 ವರ್ಷ ಜೈಲು ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸಲು ಭಾರತ ಚಿಂತನೆ ನಡೆಸಿದೆಂದು ವರದಿಯಾಗಿದೆ.ನಕಲಿ ಪಾಸ್ಪೋರ್ಟ್ ಅಥವಾ ಪ್ರವಾಸದ ದಾಖಲೆಯೊಂದಿಗೆ ಭಾರತವನ್ನು ಪ್ರವೇಶಿಸುವುದು, ಭಾರತದಲ್ಲಿ ತಂಗುವುದು ಅಥವಾ ಭಾರತದಿಂದ ನಿರ್ಗಮಿಸಿದಲ್ಲಿ ಎರಡರಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷದಿಂದ ಹತ್ತು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ನಿರ್ಧರಿಸಿದೆ.
ನಕಲಿ ದಾಖಲೆಗಳ ಮೂಲಕ ಭಾರತಕ್ಕೆ ಪ್ರವೇಶಿಸುವ ವಿದೇಶಿಯರಿಗೆ 8 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.