ಕುಂಬಳೆ: ಸಿರಿಯ ರೈಲು ಹಳಿಯ ಬಳಿ ಮಾನವನ ತಲೆ ಬುರುಡೆ, ಎಲುಬು ಪತ್ತೆ; ಫೋರೆನ್ಸಿಕ್ ವಿಭಾಗದಿಂದ ಮಾಹಿತಿ ಸಂಗ್ರಹ
ಕುಂಬಳೆ: ಸಿರಿಯ ರೈಲು ಹಳಿಯ ಬಳಿ ಮಾನವನ ತಲೆ ಬುರುಡೆ, ಎಲುಬು ಪತ್ತೆ; ಫೋರೆನ್ಸಿಕ್ ವಿಭಾಗದಿಂದ ಮಾಹಿತಿ ಸಂಗ್ರಹ
ಕುಂಬಳೆ: ಸಿರಿಯ ರೈಲ್ವೇ ಹಳಿಯ ಬಳಿ ಮಾನವ ತಲೆಬುರುಡೆ ಪತ್ತೆಯಾಗಿದೆ. ತಲೆಬುರುಡೆ, ಎಲುಬಿನ ತುಂಡುಗಳು ಪತ್ತೆಯಾಗಿದ್ದು ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಫೋರೆನ್ಸಿಕ್ ವಿಭಾಗವೂ ಆಗಮಿಸಿದ್ದು ಮಾಹಿತಿ ಸಂಗ್ರಹಿಸಿದೆ. ಆರು ತಿಂಗಳ ಹಳೆಯ ತಲೆಬುರುಡೆ ಇದೆಂದು ಶಂಕಿಸಲಾಗಿದೆ. ರೈಲು ಡಿಕ್ಕಿ ಹೊಡೆದು ಮೃತಪಟ್ಟ ಅತವಾ ರೈಲಿನಿಂದ ಬಿದ್ದು ಮೃತಪಟ್ಟ ವ್ಯಕ್ತಿಯ ತಲೆಬುರುಡೆ ಇದಾಗಿರಬಹುದೇ ಎಂಬ ಸಂಶಯ ಉಂಟಾಗಿದೆ.