GBS ಕಾಯಿಲೆ: ಮುಂಬೈನಲ್ಲಿ ಮೊದಲ ಬಲಿ
GBS ಕಾಯಿಲೆ: ಮುಂಬೈನಲ್ಲಿ ಮೊದಲ ಬಲಿ
ಮುಂಬೈ: ಮುಂಬೈ ಆಸ್ಪತ್ರೆಯಲ್ಲಿ 53 ವರ್ಷದ ವ್ಯಕ್ತಿಯೊಬ್ಬರು ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ (GBS) ನಿಂದ ಸಾವನ್ನಪ್ಪಿದ್ದಾರೆ. ನರ ಅಸ್ವಸ್ಥತೆಯಿಂದಾಗಿ ಉಂಟಾಗುವ ಕಾಯಿಲೆ ಇದಾಗಿದ್ದು, ಮಹಾರಾಷ್ಟ್ರ ರಾಜ್ಯದಲ್ಲಿ ಒಟ್ಟು 192 GBS ಶಂಕಿತ ಪ್ರಕರಣಗಳು ಪತ್ತೆಯಾಗಿವೆ.
ಮುಂಬೈನ ವಡಾಲಾ ಪ್ರದೇಶದ ನಿವಾಸಿ ಸರಕಾರಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು, ಸ್ವಲ್ಪ ಸಮಯದ ಹಿಂದೆ ಪುಣೆಗೆ ಭೇಟಿ ನೀಡಿದ್ದರು. ಅಲ್ಲಿ ರೋಗ ಉಲ್ಬಣಗೊಂಡಿತ್ತು. ಈ ವ್ಯಕ್ತಿಯು ಹಲವಾರು ದಿನಗಳಿಂದ ಗಂಭೀರ ಸ್ಥಿತಿಯಲ್ಲಿದ್ದು ನಿನ್ನೆ ಮೃತಪಟ್ಟಿದ್ದಾರೆ