ಮಹಾಕುಂಭ ಮೇಳ: ನಾಲ್ಕು ಗಿನ್ನಿಸ್ ದಾಖಲೆಗೆ ತಯಾರಿ
ಮಹಾಕುಂಭ ಮೇಳ: ನಾಲ್ಕು ಗಿನ್ನಿಸ್ ದಾಖಲೆಗೆ ತಯಾರಿ
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕಳೆದೊಂದು ತಿಂಗಳಿಂದ ನಡೆಯುತ್ತಿರುವ ವಿಶ್ವದ ಅತೀ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳದಲ್ಲಿ ಹೊಸ ನಾಲ್ಕು ದಾಖಲೆಗಳನ್ನು ಮಾಡಲು ಉತ್ತರ ಪ್ರದೇಶ ಸರಕಾರ ತಯಾರಿ ಮಾಡಿಕೊಂಡಿದ್ದು, ಇದಕ್ಕಾಗಿ ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾರ್ಡ್ ತಂಡವು ಪ್ರಯಾಗ್ ರಾಜ್ ತಲುಪಿದೆ.
ಇಲ್ಲಿಯವರೆಗೆ ತ್ರಿವೇಣಿ ಸಂಗಮದಲ್ಲಿ 48 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಇದು ಈಗಾಗಲೇ ವಿಶ್ಚದ ಅತೀ ದೊಡ್ಡ ದಾಖಲೆಯಾಗಿದೆ.
ಇದೀಗ ಫೆ.14 ರಿಂದ 17 ರ ನಡುವೆ ನಾಲ್ಕು ಹೊಸ ದಾಖಲೆಗಳನ್ನು ನಿರ್ಮಿಸಲು ಸ್ಥಳೀಯ ಆಡಳಿತ ಸಜ್ಜಾಗಿದೆ.