2007ರ ನಂತರ ಇದೇ ಮೊದಲ ಬಾರಿಗೆ ಬಿಎಸ್ಎನ್ಎಲ್ ಗೆ ಭಾರೀ ಲಾಭ😱
2007ರ ನಂತರ ಇದೇ ಮೊದಲ ಬಾರಿಗೆ ಬಿಎಸ್ಎನ್ಎಲ್ ಗೆ ಭಾರೀ ಲಾಭ😱
ನವದೆಹಲಿ: ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ BSNL 2007 ರ ಬಳಿಕ ಇದೇ ಮೊದಲ ಬಾರಿಗೆ ಲಾಭದತ್ತ ಸಾಗಿದೆ. ಜಿಯೋ, ಏರ್ಟೆಲ್ ಸೇವೆಗಳಲ್ಲಿ ಏರಿಕೆ ಕಂಡ ನಂತರ ಗ್ರಾಹಕರು ಬಿಎಸ್ಎನ್ಎಲ್ ನತ್ತ ಮರಳುತ್ತಿದ್ದು, ಲಾಭ ಗಳಿಕೆಗೆ ಕಾರಣವಾಗಿದೆ ಎನ್ನಲಾಗಿದೆ.
2025ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ 262 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಆಕ್ರಮಣಕಾರಿ ನೆಟ್ವರ್ಕ್ ವಿಸ್ತರಣೆ ಮತ್ತು ಗ್ರಾಹಕ ಸೇರ್ಪಡೆಯಂತಹ ಕ್ರಮ ಲಾಭ ಗಳಿಕೆಗೆ ಕಾರಣವಾಗಿದೆ. ಇದರಿಂದ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಆದಾಯ ಬೆಳವಣಿಗೆಯು 20%ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಸುಧಾರಣೆಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ