ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಪರೀಕ್ಷಾಂಗ ಕುಲಸಚಿವ ವಿನಯ ಚಂದ್ರರವರಿಗೆ ಡಾಕ್ಟರೇಟ್
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಪರೀಕ್ಷಾಂಗ ಕುಲಸಚಿವ ವಿನಯ ಚಂದ್ರರವರಿಗೆ ಡಾಕ್ಟರೇಟ್
ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪರೀಕ್ಷಾಂಗ ಕುಲ ಸಚಿವರು ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗಗಳ ಡೀನ್ ಹಾಗೂ ಮುಖ್ಯಸ್ಥರಾದ ವಿನಯ ಚಂದ್ರ ಅವರಿಗೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯು ಡಾಕ್ಟರೇಟ್ ಪದವಿಯನ್ನು ನೀಡಿದೆ. ‘ ಪ್ರೋಗ್ರೆಶನ್ ಇನ್ ಇ- ವೋಟಿಂಗ್ ಸಿಸ್ಟಮ್ : ಮೋಡಿಫೈಡ್ ಬ್ಲಾಕ್ಲೈನ್ ಬೇಸ್ಡ್ ಕಿಫ್ಟೊಗ್ರಾಫಿಕ್ ಅಲ್ಗಾರಿಥಮ್ಸ್ ಫಾರ್ ಸೆಕ್ಯೂರ್ಡ್ ಇ- ವೋಟಿಂಗ್ ‘ ಎಂಬ ಶೀರ್ಷಿಕೆಯ ಅವರ ಪಿಎಚ್‌ಡಿ ಮಹಾಪ್ರಬಂಧವು ಬ್ಲಾಕ್ ಚೈನ್ ಮತ್ತು ಕ್ರಿಫ್ಟೊಗ್ರಾಫಿ ತಂತ್ರಜ್ಞಾನವನ್ನು ಬಳಸಿಕೊಂಡು ಎಲೆಕ್ಟ್ರಾನಿಕ್ ಮತದಾನ ವ್ಯವಸ್ಥೆಯನ್ನು ಸುರಕ್ಷಿತಗೊಳಿಸುವಲ್ಲಿ ಹೊಸ ರೀತಿಯ ಪ್ರಗತಿಯನ್ನು ಪರಿಶೋಧಿಸುತ್ತದೆ. ಶ್ರೀನಿವಾಸ ವಿಶ್ವವಿದ್ಯಾಲಯದ ಡಾ. ಸುರೇಶ್ ಮತ್ತು ಮಂಗಳೂರಿನ ಎಜೆಇಐಟಿಯ ಪ್ರಾಧ್ಯಾಪಕರಾದ ಡಾ. ಕೃಷ್ಣಪ್ರಸಾದ್ ಕೆ ಇವರುಗಳ ಮಾರ್ಗದರ್ಶನದಲ್ಲಿ ಈ ಪಿಎಚ್‍ಡಿ ಮಹಾಪ್ರಬಂಧವನ್ನು ಮಂಡಿಸಿದ್ದಾರೆ.
ಇವರು ಸಂತ ಫಿಲೋಮಿನಾ ಕಾಲೇಜಿನ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದಲ್ಲಿ ವಿವಿಧ ಹುದ್ದೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಸೇವಾನುಭವವನ್ನು ಹೊಂದಿದ್ದಾರೆ.