• 22 ಮಾರ್ಚ್ 2025

ತೆಂಗಿನಕಾಯಿ ಬೆಲೆ ಕಿಲೋಗೆ ರು.70ಕ್ಕೆ ಏರಿಕೆ

 ತೆಂಗಿನಕಾಯಿ ಬೆಲೆ ಕಿಲೋಗೆ ರು.70ಕ್ಕೆ ಏರಿಕೆ
Digiqole Ad

ತೆಂಗಿನಕಾಯಿ ಬೆಲೆ ಕಿಲೋಗೆ ರು.70ಕ್ಕೆ ಏರಿಕೆ

ತೆಂಗಿನಕಾಯಿ ಬೆಲೆ ಇದೀಗ ಮಾರುಕಟ್ಟೆಯಲ್ಲಿ ದಾಖಲೆಯತ್ತ ಮುನ್ನುಗ್ಗುತ್ತಿದೆ. ಮದುವೆ ಸೀಜನ್ ಮೊದಲೇ ತೆಂಗಿನಕಾಯಿ ಹಾಗೂ ಕೊಬ್ಬರಿಗೆ ಬಂಪರ್ ಬೆಲೆ ಬಂದಿದ್ದು, ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ, ಆದರೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ನಿತ್ಯದ ವೆಜ್-ನಾನ್‌ವೆಜ್ ಹೋಟೆಲ್ ಅಡುಗೆಗೆ ಹಾಗೂ ಬೇಕರಿಗೆ ಅವಶ್ಯ ವಾಗಿರುವ ತೆಂಗಿ ನಕಾಯಿಯ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಹಕರು ಖರೀದಿ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಒಣ ಕೊಬ್ಬರಿಗಿಂತ ಹಸಿ ತೆಂಗಿನಕಾಯಿಗೆ ಮತ್ತು ಕೊಬ್ಬರಿ ಎಣ್ಣೆ ಮತ್ತು ಕೊಬ್ಬರಿ ಪೌಡರ್‌ಗೆ ಬೆಲೆ ಹೆಚ್ಚಾಗಿದೆ. ಕೊಬ್ಬರಿ ಎಣ್ಣೆ ಲೀ. ಗೆ 280-320 ರು. ಆಗಿದೆ. ಕೊಬ್ಬರಿ ಪೌಡರ್ 230 ಆಗಿದೆ.

ರೈತರು ಈಗ ಹೆಚ್ಚಾಗಿ ಕೆ.ಜಿ ಲೆಕ್ಕದಲ್ಲಿ ಚಿಕ್ಕದು ದೊಡ್ಡ ತೆಂಗಿನಕಾಯಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಕ್ವಿಂಟಲ್‌ಗೆ ಸಗಟು ಬೆಲೆ 65000-70000 ರು. ಗೆ ಮಾರಾಟವಾಗುತ್ತಿದೆ. ಇದರಲ್ಲಿ ವಿಂಗಡಿಸಿದ ದಪ್ಪ ಗಾತ್ರದ ಒಂದು ಕಾಯಿಗೆ 65 ರು. ಮಧ್ಯಮ ದಪ್ಪ 45 ರು. ಹಾಗೂ ಸಣ್ಣ ಕಾಯಿ 30 ರೂ.ಗೆ ಮಾರಾಟವಾಗುತ್ತಿದೆ. ಇದು ಸಗಟು ಬೆಲೆಯಾಗಿದ್ದು, ಚಿಲ್ಲರೆ ಅಂಗಡಿಗಳಲ್ಲಿ ದಪ್ಪ 70 ರು. ಮಧ್ಯಮ 50 ರು. ಮತ್ತು ಸಣ್ಣ ತೆಂಗಿನಕಾಯಿಗಳು ರು.35ಕ್ಕೆ ಮಾರಾಟವಾಗುತ್ತಿದೆ. ಒಟ್ಟಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ತೆಂಗಿನಕಾಯಿ ದರ ಮೂರು ಪಟ್ಟು ಏರಿಕೆಯಾಗಿದೆ.

Digiqole Ad

ಈ ಸುದ್ದಿಗಳನ್ನೂ ಓದಿ