ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ
ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ
ತಿರುವನಂತಪುರಂ: ಬೆಳ್ಳಂಬೆಳಗ್ಗೆ ಮೂರೂ ಗಂಟೆಗೆ ಕೋಳಿ ಕೋಗಿ ನಿದ್ರೆಗೆ ತೊಂದರೆಯಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಕೋಳಿಯ ವಿರುದ್ಧವೇ ದೂರು ಕಂದಾಯ ವಿಭಾಗೀಯ ಕಚೇರಿಗೆ (RDO) ದೂರು ನೀಡಿರುವ ಘಟನೆಯೊಂದು ಕೇರಳದಲ್ಲಿ ಬೆಳಕಿಗೆ ಬಂದಿದೆ.
ಕೇರಳದ ಪಥನಂತಿಟ್ಟಾ ಜಿಲ್ಲೆಯ ಗ್ರಾಮವೊಂದರ ನಿವಾಸಿಯಾಗಿರುವ ರಾಧಾಕೃಷ್ಣ ಕುರುಪ್ ಅವರೇ ಕೋಳಿ ವಿರುದ್ಧ ದೂರು ನೀಡದ ವ್ಯಕ್ತಿಯಾಗಿದ್ದಾರೆ.
ರಾಧಾಕೃಷ್ಣ ಕುರುಪ್ ಅವರು ವಯೋವೃದ್ಧರಾಗಿದ್ದು ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಈ ನಡುವೆ ಅವರ ಮನೆಯ ಪಕ್ಕದಲ್ಲೇ ಅನಿಲ್ ಕುಮಾರ್ ಎಂಬವರ ಕೋಳಿ ಫಾರಂ ಇದೆ ಹಾಗೆ ಅಲ್ಲಿರುವ ಕೋಳಿಯೊಂದು ದಿನಾ ಬೆಳಿಗ್ಗೆ ಮೂರೂ ಗಂಟೆಗೆ ಕೂಗಲು ಶುರು ಮಾಡುತ್ತದೆ ಇದರಿಂದ ರಾಧಾಕೃಷ್ಣ ಅವರ ನಿದ್ರೆಗೆ ತೊಂದರೆ ಆಗುತ್ತಿತ್ತು ಈ ಕುರಿತು ಸ್ವತಃ ರಾಧಾಕೃಷ್ಣ ಅವರೇ ಕೋಳಿ ಫಾರಂ ಮಾಲೀಕ ಅನಿಲ್ ಬಳಿ ಕೋಳಿಯಿಂದ ಆಗುವ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದರು ಆದರೆ ಅನಿಲ್ ಇದಕ್ಕೆ ಸೊಪ್ಪೇ ಹಾಕಲಿಲ್ಲ ಇದರಿಂದ ರೋಸಿ ಹೋದ ರಾಧಾಕೃಷ್ಣ ಅವರು ಕೋಳಿಯ ವಿರುದ್ಧ ಕಂದಾಯ ವಿಭಾಗೀಯ ಕಚೇರಿಗೆ (RDO) ದೂರು ನೀಡಿ ನನಗೆ ಪರಿಹಾರ ನೀಡಿ ಎಂದು ವಿನಂತಿಸಿದ್ದಾರೆ.
ರಾಧಾಕೃಷ್ಣ ಅವರ ದೂರನ್ನು ಸ್ವೀಕರಿಸಿದ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ ವೇಳೆ ಕೇವಲ ರಾಧಾಕೃಷ್ಣ ಮಾತ್ರವಲ್ಲದೆ ಅಲ್ಲಿನ ಕೆಲ ನಿವಾಸಿಗಳಿಗೂ ಈ ಕೋಳಿಯಿಂದ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಅದರಂತೆ ಅಧಿಕಾರಿಗಳು ಕೋಳಿ ಫಾರಂ ಮಾಲಿಕನಿಗೆ ಹದಿನಾಲ್ಕು ದಿನದ ಒಳಗಾಗಿ ಕೋಳಿ ಫಾರಂ ಅನ್ನು ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ.