ಜಾರ್ಖಂಡ್ ನ ಚೌಪಾರನ್ ನಲ್ಲಿ 2500 ವರ್ಷ ಹಳೆ ನಾಗರಿಕತೆಯ ಕುರುಹುಗಳು ಪತ್ತೆ
ಜಾರ್ಖಂಡ್ ನ ಚೌಪಾರನ್ ನಲ್ಲಿ 2500 ವರ್ಷ ಹಳೆ ನಾಗರಿಕತೆಯ ಕುರುಹುಗಳು ಪತ್ತೆ
ಹಜಾರಿಬಾಗ್: ಜಾರ್ಖಂಡ್ ನ ಹಜಾರಿಬಾಗ್ ಜಿಲ್ಲೆಯ ಚೌಪಾರನ್ ನಲ್ಲಿ 2,500-3,000 ವರ್ಷಗಳಷ್ಟು ಹಳೆಯದಾದ ನಾಗರಿಕತೆಯ ಪುರಾತನ ಕುರುಹುಗಳು ಪತ್ತೆಯಾಗಿವೆ.
ನ್ಯೂಯಾರ್ಕ್ ನ ಹ್ಯಾಮಿಲ್ಟನ್ ಕಾಲೇಜಿನ ಇತಿಹಾಸ ವಿಭಾಗದ ಏಷ್ಯನ್ ಅಧ್ಯಯನಗಳ ಮುಖ್ಯಸ್ಥ ಡಾ. ಅಭಿಷೇಕ್ ಸಿಂಗ್ ಅಮರ್ ಅವರು ಇತ್ತೀಚೆಗೆ ಈ ಸ್ಥಳಕ್ಕೆ ಭೇಟಿ ನೀಡಿದ್ದರು, ಅವರು ಇದು ಪುರಾತತ್ತ್ವ ಪ್ರಾಮುಖ್ಯತೆಯ ಪ್ರಮುಖ ಕೇಂದ್ರ ಆಗಿದೆ ಎಂದು ಬಣ್ಣಿಸಿದ್ದರು. ಇಲ್ಲಿ ವ್ಯಾಪಕವಾದ ಉತ್ಖನನಗಳು ನಡೆದಲ್ಲಿ ಪ್ರಾಚೀನ ನಾಗರಿಕತೆಗಳ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.