• 19 ಮಾರ್ಚ್ 2025

ಸರ್ಕಾರದ ಸಂಯುಕ್ತ ಉಚಿತ ಕನ್ನಡ ಕಲಿಕಾ ತರಗತಿಗಳು ಪ್ರಾರಂಭವಾಗಿವೆ

 ಸರ್ಕಾರದ ಸಂಯುಕ್ತ ಉಚಿತ ಕನ್ನಡ ಕಲಿಕಾ ತರಗತಿಗಳು ಪ್ರಾರಂಭವಾಗಿವೆ
Digiqole Ad

ಸರ್ಕಾರದ ಸಂಯುಕ್ತ ಉಚಿತ ಕನ್ನಡ ಕಲಿಕಾ ತರಗತಿಗಳು ಪ್ರಾರಂಭವಾಗಿವೆ

ಬೆಂಗಳೂರು: ಕರ್ನಾಟಕ ಸರ್ಕಾರದ ಸಹಾಯದೊಂದಿಗೆ, ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟ್ನಲಿ (SSET) ಇಂದು, ೧೬/೨/೨೦೨೫ ವೈಟ್‌ಫೀಲ್ಡ್‌ನಲ್ಲಿ ಹೊಸ ಉಚಿತ ಕನ್ನಡ ಕಲಿಕಾ ಕೇಂದ್ರ ಪ್ರಾರಂಭಿಸಿತು. 3 ತಿಂಗಳ ಕೋರ್ಸ್ ಅನ್ನು ಒಟ್ಟು 36 ಗಂಟೆಗಳನ್ನಾಗಿ ಕ್ರಮೀಕರಿಸಲಾಗಿದೆ. ಭಾಗವಹಿಸುವವರು ಕನ್ನಡದಲ್ಲಿ ಮಾತನಾಡುವ, ಓದುವ ಮತ್ತು ಬರೆಯುವುದನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.  

ಕಲಿಯುವವರ ಅನುಕೂಲಕ್ಕೆ ಅನುಗುಣವಾಗಿ ತರಗತಿ ಸಮಯವನ್ನು ನಿಗದಿಪಡಿಸಬಹುದು. ವಾರಕ್ಕೆ ಮೂರು ಗಂಟೆಗಳ ಕಾಲ ನಿಗದಿಪಡಿಸಲಾಗಿದೆ. ಅಗತ್ಯವಿದ್ದರೆ ಅವಧಿಯನ್ನು ವಿಸ್ತರಿಸಬಹುದು. ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಕರ್ನಾಟಕ ಸರ್ಕಾರದಿಂದ ಪ್ರಮಾಣಪತ್ರ ದೊರೆಯುತ್ತದೆ. ಒಂದು ತರಗತಿಯಲ್ಲಿ 30 ಜನರನ್ನು ಮಾತ್ರ ನಿಗದಿಪಡಿಸಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಹೊಸ ತರಗತಿಯು ಪ್ರಾರಂಭವಾಗುತ್ತವೆ.  

 

 ಭಾನುವಾರ, ಫೆಬ್ರವರಿ 16, ಬೆಳಿಗ್ಗೆ 10:30 ಕ್ಕೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರೊ. ನಿರಂಜನರಾಧ್ಯ.ವಿ.ಪಿ. ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಅವರು, ಮಾತೃಭಾಷೆಯ ಮೂಲಕವೇ ಇನ್ನೊಂದು ಭಾಷೆಯನ್ನು ಕಲಿಯಬೇಕು, ಭಾಷೆಯ ಬಗ್ಗೆ ಹೆಮ್ಮೆ ಪಡಯಬೇಕು, ದುರಹಂಕಾರ ಬೇಡ ಎಂದರು. ಮಲಯಾಳಂ ಮಿಷನ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಶ್ರೀ. ಕೆ. ದಾಮೋಧರನ್, ಟಾಮಿ ಜೆ. ಅಲುಂಕಲ್ ಸಂಯೋಜಕರು, ಅಡ್ವ. ಬುಶ್ರವಲಪ್ಪಿಲ್ ಭಾಗವಹಿಸಿದ್ದರು. ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಡಾ. ಸುಷ್ಮಾ ಶಂಕರ್ ಆಯೋಜಿಸಿದ್ದ ಉಚಿತ ಕನ್ನಡ ಕಲಿಕೆ ಕೇಂದ್ರದ ಪ್ರವೇಶನೋತ್ಸವದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಶ್ರೀ ಆರ್. ಶ್ರೀನಿವಾಸ್, ಪ್ರವಾಸಿ ಮಲಯಾಳಿ ಅಸೋಸಿಯೇಷನ್ ​​ವೈಟ್‌ಫೀಲ್ಡ್, ಅಧ್ಯಕ್ಷ ರಮೇಶ್ ಕುಮಾರ್.ವಿ., ಕಾರ್ಯದರ್ಶಿ ರಾಗೇಶ್.ಪಿ, ಸಂತೋಷ್ ಕುಮಾರ್,

 ಕೇರಳ ಸಮಾಜ ವೈಟ್‌ಫೀಲ್ಡ್ ಜೋನ್, ಸಂಚಾಲಕ ಸುರೇಶ್ ಕುಮಾರ್ ಮತ್ತು ಇತರರು 

 ಶುಭಾಶಯಗಳನ್ನು ತಿಳಿಸಲಾಯಿತು.

 ಉತ್ತಮ ಸಂವಹನ ಮತ್ತು ಸಾಂಸ್ಕೃತಿಕ ಏಕೀಕರಣಕ್ಕಾಗಿ ಭಾಷೆಯನ್ನು ಕಲಿಯಲು ಆಸಕ್ತಿ ಹೊಂದಿರುವ ಪ್ರೀತಿಯ ಮಲಯಾಳಿ ವೃತ್ತಿಪರರು, ಮತ್ತು ಖಾಯಂ ನಿವಾಸಿಗಳು, ಅನ್ಯಭಾಷಿಕರಾದ ವೈದ್ಯರುಗಳು, ಪಾರ್ಸಿಗಳು, ಬ್ಯಾಂಕ್ ಉದ್ಯೋಗಿಗಳು, ಪತ್ರಿಕೋದ್ಯಮಿಗಳು, ಶಿಕ್ಷಕರು ಮುಂತಾದವರು ಈ ಅವಕಾಶವನ್ನು ಬಳಸಿಕೊಳ್ಳುವುದೂ ಅವರು ಕರ್ತವ್ಯ ತಿಳಿದುಕೊಳ್ಳ ಬೇಕೆಂದು ಡಾ. ಸುಷ್ಮಾ ಶಂಕರ್ ವಿನಂತಿಸಿದರು. 

 ಕಳೆದ ೧೭ ವರ್ಷಗಳಿಂದ, ಎಸ್ ಎಸ್ ಟಿ ಯಲಿ ಮೆಯ್ ೧ ರಿಂದ ೩೦ ರವರೆಗೆ ಉಚಿತ ಬೇಸಿಗೆ ಕನ್ನಡ ಕಲಿಕಾ ಶಿಬಿರವನ್ನು ನಡೆಸುತ್ತಿದ್ದಾರೆ. ಕರ್ನಾಟಕ ಸರ್ಕಾರ ಇದನ್ನು ಶಾಶ್ವತ ಕನ್ನಡ ಕಲಿಕಾ ಕೇಂದ್ರವೆಂದು ಗುರುತಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದರು. ಮೇ ತಿಂಗಳಲ್ಲಿ ಇನ್ನು ಮುಂದೆ ಉಚಿತ ಬೇಸಿಗೆ ಅಧ್ಯಯನ ಶಿಬಿರ ಇರುವುದಿಲ್ಲ ಎಂದು ಅವರು ಘೋಷಿಸಿದರು.

 ಕರ್ನಾಟಕ ಸರ್ಕಾರದಿಂದ ವಿಶೇಷ ತರಬೇತಿ ಪಡೆದಿರುವ ಡಾ. ಸುಷ್ಮಾ ಶಂಕರ್ ತರಗತಿಗಳನ್ನು ಮುನ್ನಡೆಸಲಿದ್ದಾರೆ. 

 ತರಬೇತಿ ಪಡೆದ ಪ್ರೊ. ರಾಕೇಶ್ ವಿ.ಎಸ್ ಮತ್ತು ರೆಬಿನ್ ರವೀಂದ್ರನ್ ತರಗತಿಗಳನ್ನು ನಡೆಸಲಿದ್ದಾರೆ. ತೊದಲ್ನುಡಿ ಮಕ್ಕಳ ಕನ್ನಡ ಮಾಸಪತ್ರಿಕೆಯ ಸಂಪಾದಕರೂ ಹಾಗು

ದ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷರೂವಾಗಿದ್ದಾರೆ ಸುಷ್ಮಾ. ಮಲಯಾಳಿಯಾಗಿ ಕನ್ನಡ ಸಾಹಿತ್ಯದಲ್ಲಿ ಪಿಹೆಚ್ ಡಿ, ಎಂಫಿಲ್, ಎಂಎ ಪದವಿಗಳು ಪಡೆದಿರುವ 

ಡಾ. ಸುಷ್ಮಶಂಕರ್.

 

ಹೆಚ್ಚಿನ ಮಾಹಿತಿಗಾಗಿ:

 9901041889;

 9742853241.

 

Digiqole Ad

ಈ ಸುದ್ದಿಗಳನ್ನೂ ಓದಿ