iPhone 16e ಬಿಡುಗಡೆ: ಭಾರತದಲ್ಲಿ ದುಬಾರಿ!
iPhone 16e ಬಿಡುಗಡೆ: ಭಾರತದಲ್ಲಿ ದುಬಾರಿ!
ಬಹು ನಿರೀಕ್ಷಿತ iPhone 16e ಫೋನನ್ನು ಆ್ಯಪಲ್ ಕಂಪನಿ ಬಿಡುಗಡೆ ಮಾಡಿದೆ. ಜಪಾನ್, ಚೀನಾ, ವಿಯೆಟ್ನಾಂಗೆ ಹೋಲಿಸಿದರೆ ಭಾರತದಲ್ಲಿ iPhone 16e ದರ ದುಬಾರಿಯಾಗಿದೆ. ಬಿಳಿ ಮತ್ತು ಕಪ್ಪು ಬಣ್ಣದ ಈ ಐಫೋನ್ ಮೂರು ಆಂತರಿಕ ಮೆಮೋರಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಭಾರತದಲ್ಲಿ 128 ಜಿಬಿಗೆ 59,000 ರೂ., 256 ಜಿಬಿಗೆ 69,900 ರೂ., 512 ಜಿಬಿಗೆ 89,000 ರೂ. ದರವನ್ನು ನಿಗದಿ ಮಾಡಲಾಗಿದೆ. ಫೆ. 28 ರಿಂದ ಈ ಫೋನಿನ ಮಾರಾಟ ಆರಂಭವಾಗಲಿದೆ. iPhone 16e ಫೋನನ್ನು ಭಾರತದಲ್ಲೇ ಜೋಡಣೆ ಮಾಡಲಾಗುತ್ತಿದೆ.