ಬಡಗನ್ನೂರು ಸಂಗಮ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ ಹಾಗೂ ವಿಕಲಚೇತನರ ಸಂಘ ಉದ್ಘಾಟನೆ
ಬಡಗನ್ನೂರು ಸಂಗಮ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ ಹಾಗೂ ವಿಕಲಚೇತನರ ಸಂಘ ಉದ್ಘಾಟನೆ
ಸಂಗಮ ಸಂಜೀವಿನಿ ಗ್ರಾಮ ಪಂಚಾಯತಿ ಒಕ್ಕೂಟದ ಮಾಸಿಕ ಸಭೆಯನ್ನು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು. ಸಂಘಟನೆಯಿಂದ ಸಮೃದ್ದಿ ಅಭಿಯಾನದಡಿ ವಿಶೇಷ ಚೇತನರ ಸಂಘ “ಕೂವೇ ಶಾಸ್ತರ “ಹಾಗೂ ಗೃಹ ಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳ ಒಂದು ಸಂಘ ರಚನೆಯನ್ನು ದೀಪ ಬೆಳಗಿಸುವುದರೊಂದಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಉದ್ಘಾಟನೆ ಮಾಡಿದರು. ಹಾಗೂ ವಲಯ ಮೇಲ್ವಿಚಾರಕರಾದ ನಮಿತಾ ಸಂಜೀವಿನಿ ಯೋಜನೆಯ ಬಗ್ಗೆ, ಲಿಂಗತ್ವ ವೇದಿಕೆ ಸಮಿತಿ ರಚನೆ ಬಗ್ಗೆ, ಘಟಕದ ಮೇಲುಸ್ತುವಾರಿ ಸಭೆಯ ಬಗ್ಗೆ, ರೈತ ಸಂತೆಯ ಬಗ್ಗೆ ಮಾಹಿತಿ ನೀಡಿದರು ಒಕ್ಕೂಟದ ಅಧ್ಯಕ್ಷರು,ಕಾರ್ಯದರ್ಶಿ ಪದಾಧಿಕಾರಿಗಳು , ಸಿಬ್ಬಂದಿಗಳು ಹಾಜರಿದ್ದರು.