ಬಡಗನ್ನೂರು ಗ್ರಾಮ ಪಂಚಾಯತ್ ನಲ್ಲಿ ಲಿಂಗತ್ವ ವೇದಿಕೆ ಸಮಿತಿ ರಚನೆ , ಸಂಜೀವಿನಿ ರೈತ ಸಂತೆ , ಮಹಿಳಾ ಗ್ರಾಮ ಸಭೆ ಮತ್ತು ಮಕ್ಕಳ ಗ್ರಾಮ ಸಭೆ :
ಬಡಗನ್ನೂರು ಗ್ರಾಮ ಪಂಚಾಯತ್ ನಲ್ಲಿ ಲಿಂಗತ್ವ ವೇದಿಕೆ ಸಮಿತಿ ರಚನೆ , ಸಂಜೀವಿನಿ ರೈತ ಸಂತೆ , ಮಹಿಳಾ ಗ್ರಾಮ ಸಭೆ ಮತ್ತು ಮಕ್ಕಳ ಗ್ರಾಮ ಸಭೆ :
ಬಡಗನ್ನೂರು: ಬಡಗನ್ನೂರು ಗ್ರಾಮ ಪಂಚಾಯತಿನಲ್ಲಿ ಲಿಂಗತ್ವ ವೇದಿಕೆಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯವರ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಯಿತು. ಸಮಿತಿ ರಚನೆ ಉದ್ದೇಶದ ಮಾಹಿತಿಯನ್ನು ವಲಯ ಮೇಲ್ವಿಚಾರಕರು ನೀಡಿದರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಒಕ್ಕೂಟದ ಕಾರ್ಯದರ್ಶಿ, ಶಾಲಾ ಮುಖ್ಯೋಪಾಧ್ಯಾಯರು, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು, ಬೀಟ್ ಪೋಲೀಸ್, ಎಂ.ಬಿ.ಕೆ & ಎಲ್.ಸಿ.ಆರ್.ಪಿ ಉಪಸ್ಥಿತರಿದ್ದು ಗ್ರಾಮೀಣ ರೈತ ಸಂತೆಯನ್ನು ಗ್ರಾಮ ಪಂಚಾಯತ್ ಸಭಾಂಗಣ ದಲ್ಲಿ ನಡೆಸಲಾಯಿತು. ಮಹಿಳಾ ಗ್ರಾಮ ಸಭೆ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ಎನ್.ಆರ್.ಎಲ್.ಎಂ ಯೋಜನೆಯ ಬಗ್ಗೆ ಮಾಹಿತಿ ಹಾಗೂ ಲಿಂಗತ್ವ ಆಧಾರಿತ ದೌರ್ಜನ್ಯ ಮುಂದುವರಿದ ಭಾಗವಾಗಿ ಪರಿವರ್ತನೆ ಅಭಿಯಾನದ ಗುರಿ ಉದ್ದೇಶದ ಮಾಹಿತಿಯನ್ನು ತಾಲೂಕು ಪಂಚಾಯತ್ ನ ವಲಯ ಮೇಲ್ವಿಚಾರಕರಾದ ನಮಿತಾ ನೀಡಿದರು.
ಮಹಿಳೆಯರಿಗೆ ಆರೋಗ್ಯ, ಕಿಶೋರಿಯರಿಗೆ ಹದಿಹರೆಯದ ಬಗ್ಗೆ, ಪೌಷ್ಟಿಕ ಆಹಾರದ ಬಗ್ಗೆ ಸಮುದಾಯ ಆರೋಗ್ಯ ಅಧಿಕಾರಿ ಮಾಹಿತಿ ನೀಡಿದರು, ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕರು ಇಲಾಖಾ ಯೋಜನೆಯ ಬಗ್ಗೆ, ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರದ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯವರು ವಸತಿ, ನಿವೇಶನ, ನೀರಿನ ಸಮಸ್ಯೆ, ದಾರಿ ದೀಪದ ಬಗ್ಗೆ ಅರ್ಜಿಗಳಿದ್ದಲ್ಲಿ ನೀಡುವಂತೆ ಮಾಹಿತಿ ನೀಡಿದರು