ಮೆಹಂದಿಯಿಂದ ಚರ್ಮರೋಗ, ಕ್ಯಾನ್ಸರ್ ಸಚಿವ ಗುಂಡೂರಾವ್ ಮಾಹಿತಿ :
ಮೆಹಂದಿಯಿಂದ ಚರ್ಮರೋಗ, ಕ್ಯಾನ್ಸರ್
ಸಚಿವ ಗುಂಡೂರಾವ್ ಮಾಹಿತಿ :
ಬೆಂಗಳೂರು: ಟ್ಯಾಟೊ, ಲಿಪ್ ಸ್ಟಿಕ್, ಐ ಲೈನರ್, ಕಳಪೆ ಪೌಡರ್, ಕಾಜಲ್ ನಿಂದ ಹೆಚ್ಐವಿ, ಚರ್ಮರೋಗ, ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ. ಇದೀಗ ಮೆಹಂದಿಯಿಂದ, ಚರ್ಮರೋಗ, ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಳಪೆ ಗುಣಮಟ್ಟದ ಮೆಹಂದಿ ಬಳಕೆಯಿಂದ ಚರ್ಮರೋಗಗಳು ಬರುತ್ತಿವೆ ಎಂಬ ಆತಂಕ ಹೆಚ್ಚುತ್ತಿದೆ. ಕೆಲವು ಮೆಹಂದಿಗಳಲ್ಲಿ ಚರ್ಮದ ಅಲರ್ಜಿ,ಕೆರೆತ, ಗಾಯಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಸಮಸ್ಯೆ ತಡೆಗಟ್ಟಲು ಕಳಪೆ ಮೆಹಂದಿ ಮಾರಾಟದ ಮೇಲೆ ಕಡಿವಾಣ ಹಾಕಲು ಸರಕಾರ ಚಿಂತನೆ ನಡೆಸಿದೆ.