ಪಾಸ್‌ಪೋರ್ಟ್‌ಗೆ ಜನನ ಪ್ರಮಾಣಪತ್ರ ಕಡ್ಡಾಯ: ಕೇಂದ್ರ ಸರ್ಕಾರ ಆದೇಶ
ಪಾಸ್‌ಪೋರ್ಟ್‌ಗೆ ಜನನ ಪ್ರಮಾಣಪತ್ರ ಕಡ್ಡಾಯ: ಕೇಂದ್ರ ಸರ್ಕಾರ ಆದೇಶ
2023ರ ಅಕ್ಟೋಬರ್ 1ರ ಬಳಿಕ ಹುಟ್ಟಿದ ಪ್ರತಿಯೊಬ್ಬ ನಾಗರಿಕನಿಗೂ ಪಾಸ್‌ಪೋರ್ಟ್ ಪಡೆಯಲು ಜನನ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನು-2023ರ ಅನ್ವಯ ಶುಕ್ರವಾರ ಅಧಿಕೃತ ಗೆಜೆಟ್‌ನಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ.ಆದರೆ 2025ರ ಪಾಸ್‌ಪೋರ್ಟ್ (ತಿದ್ದುಪಡಿ) ನಿಯಮಗಳ ಪ್ರಕಾರ, ಈ ದಿನಾಂಕಕ್ಕಿಂತ ಮೊದಲು ಜನಿಸಿದವರಿಗೆ ಜನನ ಪುರಾವೆಯಾಗಿ ಪರ್ಯಾಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅವರು ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಶಾಲೆಯ ಟ್ರಾನ್ಸಫರ್ ಪ್ರಮಾಣಪತ್ರಗಳಂತಹ ಇತರ ದಾಖಲೆಗಳನ್ನು ಸಲ್ಲಿಸಬಹುದಾಗಿದೆ. ಪಾಸ್‌ಪೋರ್ಟ್ ಪಡೆಯುವ ನೀತಿಯಲ್ಲಿ ಸರಳೀಕರಣ ಮಾಡಲು ಮುಂದಾದ ಕೇಂದ್ರ ಸರ್ಕಾರ, ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನನ್ನು 2023ರ ಅಕ್ಟೋಬರ್ 1ರಿಂದ ಜಾರಿಗೊಳಿಸಿತ್ತು.