• 22 ಮಾರ್ಚ್ 2025

ಕಡಬ:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಂಟ್ರ ಪಾಲೆತಡ್ಕ ಶಾಲೆಗೆ ಡೆಸ್ಕ್ ಬೆಂಚ್ ವಿತರಣೆ

 ಕಡಬ:ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯಿಂದ ಬಂಟ್ರ ಪಾಲೆತಡ್ಕ ಶಾಲೆಗೆ ಡೆಸ್ಕ್ ಬೆಂಚ್ ವಿತರಣೆ
Digiqole Ad

ಕಡಬ:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಂಟ್ರ ಪಾಲೆತಡ್ಕ ಶಾಲೆಗೆ ಡೆಸ್ಕ್ ಬೆಂಚ್ ವಿತರಣೆ

ಧರ್ಮಸ್ಥಳ ಯೋಜನೆಯು ಸಾಲ ನೀಡುವ ಸಂಸ್ಥೆಯಲ್ಲ ಬದಲಾಗಿ ಅವಶ್ಯಕತೆಗಳನ್ನು ಗುರುತಿಸಿ ಸಹಕಾರ ನೀಡುವ ಸಂಸ್ಥೆ : ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ .

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಕಡಬ ತಾಲೂಕು ಬಿಳಿನೆಲೆ ವಲಯದ ಬಂಟ್ರ ಪಾಲೆತಡ್ಕ ಹಿರಿಯ ಪ್ರಾಥಮಿಕ ಶಾಲೆಯ ಪೀಠೋಪಕರಣದ ಅವಶ್ಯಕತೆಯನ್ನು ಗುರುತಿಸಿ ಆರು ಜೊತೆ ಡೆಸ್ಕ್ ಬೆಂಚ್ ಗಳನ್ನು ಪೂಜ್ಯರ ಮಂಜೂರಾತಿಯೊಂದಿಗೆ ಸಮುದಾಯ ಅಭಿವೃಧ್ಧಿ ವಿಭಾಗದಿಂದ ವಿತರಿಸಲಾಯಿತು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಯವರು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವಧ್ಧಿ ಯೋಜನೆಯಿಂದ ಸಮುದಾಯದ ಅವಶ್ಯಕತೆಯನ್ನು ಗುರುತಿಸಿ ದೇವಸ್ಥಾನ ,ದೈವಸ್ಥಾನದ ಜೀರ್ಣೋದ್ದಾರಕ್ಕೆ ,ಸಮುದಾಯ ಭವನ ಸಭಾ ಭವನ ನಿರ್ಮಾಣ, ಶಾಲಾ ಮೂಲ ಸೌಕರ್ಯ ಗಳ ಒದಗಣೆ ನಿರ್ಗತಿಕರಿಗೆ ಮಾಶಾಸನ ವಾತ್ಸಲ್ಯ ಮನೆಯ ನಿರ್ಮಾಣ ಎಂಬಿತ್ಯಾದಿ ಅನೇಕ ಜನಪರ ಕಾರ್ಯಕ್ರಮಗಳು ನಡೆಯುತ್ತಿದೆ.

 ಜನಸಾಮಾನ್ಯರಲ್ಲಿ ಧರ್ಮಸ್ಥಳ ಯೋಜನೆ ಸಾಲ ನೀಡುವ ಸಂಸ್ಥೆ ಎನ್ನುವ ಅಭಿಪ್ರಾಯವಿದೆ. ಆದರೆ ಯೋಜನೆ ಪಾಲುದಾರರ ಅವಶ್ಯಕತೆಗಳನ್ನು ಗುರುತಿಸಿ ಕೊಡುವ ಹಾಗೂ ಬೇಡಿಕೆಗೆ ಅನುಗುಣವಾಗಿ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲ ಒದಗಿಸಿ ಕೊಡುವ ಬಿ .ಸಿ ಸಂಸ್ಥೆ ಯಾಗಿದೆ ಎಂದರು.

 

   ಕಾರ್ಯಕ್ರಮ ದ ಮುಖ್ಯ ಅತಿಥಿಗಳಾಗಿ ಕಡಬ ತಾಲೂಕು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಸಮಿತಿ ಬಿಳಿನೆಲೆ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಕೇನ್ಯ ಸಭಾ ಕಾರ್ಯಕ್ರಮವನ್ನು ಉಧ್ಘಾಟಿಸಿದರು.

     ಪ್ರಗತಿಬಂಧು ಸ್ವಸಹಾಯ ಸಂಘಗಳ ಬಂಟ್ರ ಒಕ್ಕೂಟದ ಅಧ್ಯಕ್ಷರಾದ ಸತೀಶ್ಚಂದ್ರ ಮೈಕಾಜೆ ಸೇವಾಪ್ರತಿನಿಧಿ ನೇತ್ರಾ, ರೇಖಾ ˌ ಬಂಟ್ರ ಒಕ್ಕೂಟದ ಪಧಾದಿಕಾರಿಗಳು ಶಾಲಾಭಿವೃಧ್ಧಿ ಸಮಿತಿ ಸದಸ್ಯರುಗಳು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

     ಶಾಲಾಭಿವೃಧ್ಧಿ ಸಮಿತಿ ಉಪಾಧ್ಯಕ್ಷರಾದ ನಾಸೀರ್ ಕಾರ್ಯಕ್ರಮದ ಅಧ್ಶಕ್ಷತೆ ವಹಿಸಿದ್ದರು.

     ಮುಖ್ಯೋಪಾಧ್ಯಾಯರಾದ ಶ್ಯಾಮಲಾ ಸ್ವಾಗತಿಸಿದರು.

     ಶಾಲಾ ಶಿಕ್ಷಕರಾದ ಪ್ರವೀಣ್ ಎಸ್ ಕೆ ರವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ