• 27 ಮಾರ್ಚ್ 2025

ಮಂಜೇಶ್ವರ: ಭೀಕರ ವಾಹನ ಅಪಘಾತ, ತಂದೆ-ಮಗ ಸಹಿತ ಮೂವರು ಮೃತ್ಯು

 ಮಂಜೇಶ್ವರ: ಭೀಕರ ವಾಹನ ಅಪಘಾತ, ತಂದೆ-ಮಗ ಸಹಿತ ಮೂವರು ಮೃತ್ಯು
Digiqole Ad

ಮಂಜೇಶ್ವರ: ಭೀಕರ ವಾಹನ ಅಪಘಾತ, ತಂದೆ-ಮಗ ಸಹಿತ ಮೂವರು ಮೃತ್ಯು 

ಮಂಜೇಶ್ವರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಕಂಬಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತಂದೆ, ಮಗ ಸಹಿತ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮಂಜೇಶ್ವರದ ಹೊಸಂಗಡಿ ಚೆಕ್ ಪೋಸ್ಟ್ ಬಳಿ ನಿನ್ನೆ ರಾತ್ರಿ ನಡೆದಿದೆ.

ಘಟನೆಯಲ್ಲಿ ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.

ಮೃತರನ್ನು ಪೈವಳಿಕೆ ಬಾಯಿಕಟ್ಟೆ ನಿವಾಸಿಗಳಾದ ಜನಾರ್ಧನ, ಅವರ ಪುತ್ರರಾದ ವರುಣ್ ಮತ್ತು ಕಿಶನ್ ಎಂದು ಗುರುತಿಸಲಾಗಿದೆ.

ರತ್ನಂ ಎಂಬವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Digiqole Ad

ಈ ಸುದ್ದಿಗಳನ್ನೂ ಓದಿ