• 27 ಮಾರ್ಚ್ 2025

ಯಕ್ಷಗಾನದ ನೆಲದಿ ಕಾವ್ಯದಾಸೋಹ ಯುವ ಮನಸುಗಳಿಗೆ ವೇದಿಕೆ ಕಲ್ಪಿಸಿ – ವಿ ಬಿ ಕುಳಮರ್ವ

 ಯಕ್ಷಗಾನದ ನೆಲದಿ ಕಾವ್ಯದಾಸೋಹ ಯುವ ಮನಸುಗಳಿಗೆ ವೇದಿಕೆ ಕಲ್ಪಿಸಿ – ವಿ ಬಿ ಕುಳಮರ್ವ
Digiqole Ad

ಯಕ್ಷಗಾನದ ನೆಲದಿ ಕಾವ್ಯದಾಸೋಹ ಯುವ ಮನಸುಗಳಿಗೆ ವೇದಿಕೆ ಕಲ್ಪಿಸಿ – ವಿ ಬಿ ಕುಳಮರ್ವ

ಕಾಸರಗೋಡು : ‘ನಗರ ಹಾಗೂ ಗ್ರಾಮೀಣ ಪ್ರದೇಶದ ಕನ್ನಡದ ಯುವಪೀಳಿಗೆಗೆ ವೇದಿಕೆ ಕಲ್ಪಿಸಿ, ಕನ್ನಡದ ಮುಖ್ಯವಾಹಿನಿಗೆ ತರದಿದ್ದರೆ ಮುಂದಿನ ಕನ್ನಡ ಸಾಹಿತ್ಯ ಬೆಳವಣಿಗೆ ಅಸಾಧ್ಯ”, ಎಂದು ಹಿರಿಯ ಶಿಕ್ಷಣ ತಜ್ಞ ವಿ. ಬಿ. ಕುಳಮರ್ವ ಹೇಳಿದರು. ಅವರು ಭಾನುವಾರ ದೇಲಂಪಾಡಿಯ ಬನಾರಿ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಹಾಗೂ ಬನಾರಿಯ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಸಹಕಾರದಲ್ಲಿ ನಡೆದ ‘ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಸ್ಮರಣಾಂಜಲಿ’ ಕಾರ್ಯಕ್ರಮದ ಚುಟುಕು ಕವಿಗೋಷ್ಠಿ ಯ ಅಧ್ಯಕ್ಷ ಬಾಷಣದಲ್ಲಿ ಆತಂಕ ವ್ಯಕ್ತ ಪಡಿಸಿದರು “ಈ ನಿಟ್ಟಿನಲ್ಲಿ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ತನ್ನ ಕಾರ್ಯಕ್ರಮಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ನವಾಗತ ಯುವ ಕನ್ನಡ ಮನಸುಗಳಿಗೆ ವೇದಿಕೆ ಕಲ್ಪಿಸುವ ಕಾರ್ಯವನ್ನು ಅವರು ಶ್ಲಾಘಿಸಿದರು. ಕವಿಗೋಷ್ಠಿಯಲ್ಲಿ ದೇಲಂಪಾಡಿ ಶಾಲಾ ವಿದ್ಯಾರ್ಥಿಗಳಾದ ಶಿಲ್ಪಾ ಎಂ, ಯಮಿತಾ, ಹನಿ ಬಿ. ಪೂಜಸ್ವಿ ಎಂ, ಶ್ರಾವ್ಯಶ್ರೀ, ಚೈತ್ರಾಲಿ, ಅದಿತಿ ಹಾಗೂ ಮುಕ್ತ ವಿಭಾಗದಲ್ಲಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ಆದ್ಯಂತ್ ಅಡೂರು. ಪವಿತ್ರ ಎಂ ಬೆಳ್ಳಿಪ್ಪಾಡಿ, ಶಶಿಕಲಾ ಟೀಚರ್ ಕುಂಬಳೆ, ಕೆ ಎಸ್ ದೇವರಾಜ್ ಆಚಾರ್ಯ ಸೂರಂಬೈಲ್, ಚಿತ್ರಕಲಾ ದೇವರಾಜ್ ಆಚಾರ್ಯ ಸೂರಂಬೈಲ್. ಎಂ ಎ ಮುಸ್ತಫಾ ಬೆಳ್ಳಾರೆ, ಶಾರದಾ ಮೊಳೆಯಾರ್ ಎಡನೀರು, ಅಪೂರ್ವ ಕಾರಂತ್ ಪುತ್ತೂರು, ಶೇಖರ ಎಂ ದೇಲಂಪಾಡಿ, ಪೂರ್ಣಿಮಾ ಕಾರಿಂಜ, ವಿಜಯರಾಜ ಪುಣಿಂಚಿತ್ತಾಯ, ಬೆಳ್ಳೂರು, ಗಿರೀಶ್ ಪೆರಿಯಡ್ಕ, ಪೂಜಾ ಸಿ ಎಚ್, ಅನಿತಾ ಗಣೇಶ್ ಸೀತಾಂಗೋಳಿ, ಅನಿತಾ ಶೆಣೈ ಮಂಗಳೂರು ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ರಮಾನಂದ ಬನಾರಿ, ವಿಶ್ವವಿನೋದ ಬನಾರಿ, ನಂದಕಿಶೋರ ಬನಾರಿ, ಪೂರ್ಣಿಮಾ ಬನಾರಿ, ಚಂದ್ರಶೇಖರ ಏತಡ್ಕ, ಜಯಾನಂದ ಪೆರಾಜೆ, ಡಾ. ಶಾಂತಾ ಪುತ್ತೂರು, ಡಿ. ರಾಮಣ್ಣ ಮಾಸ್ತರ್, ಜಲಜಾಕ್ಷಿ ರೈ, ಡಾ. ವಾಮನ್ ರಾವ್ ಬೇಕಲ್, ಸಂದ್ಯಾರಾಣಿ ಟೀಚರ್, ಕೊಳ್ಚಪ್ಪೆ ಗೋವಿಂದ ಭಟ್, ಅಪೂರ್ವ ಕಾರಂತ್ ಪುತ್ತೂರು, ಉದ್ಯಮಿ ಗೋಪಾಲಕೃಷ್ಣ ಭಟ್ ಪುತ್ತೂರು ಭಾಗವಹಿಸಿದ್ದರು. ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಅವರು ಕಾರ್ಯಕ್ರಮ ನಿರೂಪಿಸಿದರು. ಸಂಘಟಕ ವಸಂತ ಕೆರೆಮನೆ ವಂದಿಸಿದರು. ಬನಸಿರಿಯ ವನದ ಯಕ್ಷನಾಕದಲ್ಲಿ ನಡೆದ ಕಾವ್ಯ ದಾಸೋಹ ಸೇರಿದ್ದ ಸಾಹಿತ್ಯಾಸಕ್ತರ ಮನ ಗೆದ್ದಿತ್ತು.

Digiqole Ad

ಈ ಸುದ್ದಿಗಳನ್ನೂ ಓದಿ