ಕೌಟುಂಬಿಕ ಕಲಹ, ಮನನೊಂದು 3 ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿದ ತಾಯಿ!
ಕೌಟುಂಬಿಕ ಕಲಹ, ಮನನೊಂದು 3 ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿದ ತಾಯಿ!
ಬೆಳಗಾವಿ: ಕೌಟುಂಬಿಕ ಕಲಹದಿಂದ ಮನನೊಂದು ಮಹಿಳೆಯೊಬ್ಬರು 3 ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿದ್ದಾರೆ, ಈ ಘಟನೆಯು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಮತ್ತು ತಾಯಿ ಸಾವನ್ನಪ್ಪಿದ್ದು 1 ಮಗು ಪ್ರಾಣಾಪಾಯದಿಂದ ಪಾರಾಗಿದೆ.
ತಾಯಿ ಶಾರದಾ ಡಾಲೆ(32) ಮಕ್ಕಳಾದ ಅಮೃತಾ(14),ಆದರ್ಶ(8) ಮೃತರು. ಅನುಕ್ಷಾ ಡಾಲೆ ಬದುಕುಳಿದ ಮಗು,ಮಗುವನ್ನು ರಾಯಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪತಿ ಅಶೋಕ ಡಾಲೆ(45) ಪ್ರತಿ ನಿತ್ಯ ಕುಡಿದು ಬಂದು ಪತ್ನಿ ಮತ್ತು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ,ಇದರಿಂದ ಮನನೊಂದ ಶಾರದಾ ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ್ದಾರೆ ಎನ್ನಲಾಗಿದೆ.