• 22 ಮಾರ್ಚ್ 2025

ಕಾಡು ಪ್ರಾಣಿಗಳ ದಾಳಿಯಿಂದ ಪಾರಾಗಲು ಗುಂಡಿಕ್ಕಿ ಹತ್ಯೆಗೆ ನಿರ್ಧರಿಸಿದ ಕೇರಳ

 ಕಾಡು ಪ್ರಾಣಿಗಳ ದಾಳಿಯಿಂದ ಪಾರಾಗಲು ಗುಂಡಿಕ್ಕಿ ಹತ್ಯೆಗೆ ನಿರ್ಧರಿಸಿದ ಕೇರಳ
Digiqole Ad

ಕಾಡು ಪ್ರಾಣಿಗಳ ದಾಳಿಯಿಂದ ಪಾರಾಗಲು ಗುಂಡಿಕ್ಕಿ ಹತ್ಯೆಗೆ ನಿರ್ಧರಿಸಿದ ಕೇರಳ

ಕೋಯಿಕ್ಕೋಡ್: ಕಾಡು ಪ್ರಾಣಿಗಳ ದಾಳಿಯಿಂದ ಪಾರಾಗಲು ಅವುಗಳನ್ನು ಗುಂಡಿಕ್ಕಿ ಹತ್ಯೆ ಮಾಡುವ ನಿರ್ಧಾರಕ್ಕೆ ಕೇರಳ ಮುಂದಾಗಿದೆ.

ಮಾನವನ ಬದುಕಿಗೆ ಅಡ್ಡಿಯಾಗುವ ವನ್ಯ ಜೀವಿಗಳನ್ನು ಕೊಲ್ಲಲು ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಚಕ್ಕಿತ್ತಪರ ಗ್ರಾಮ ಪಂಚಾಯತಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಆನೆ, ಹುಲಿ, ಹಂದಿ ಮೊದಲಾದ ಕಾಡು ಪ್ರಾಣಿಗಳು ಮಾನವರು ವಾಸಿಸುವ ಸ್ಥಳಕ್ಕೆ ಪ್ರವೇಶಿಸಿದರೆ ಗುಂಡಿಕ್ಕಿ ಕೊಲ್ಲುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಲ್ಲದೆ ಪ್ರಾಣಿಗಳನ್ನು ಗುಂಡಿಕ್ಕಿ ಕೊಲ್ಲಲು 20 ಶೂಟರ್ ಗಳ ನೇಮಕ ಮಾಡಲು ಸಮಿತಿ ರಚಿಸಲು ಕೂಡ ಪಂಚಾಯತ್ ನಿರ್ಧರಿಸಿದೆ. ಈ ನಿರ್ಧಾರಕ್ಕೆ ವಿಪಕ್ಷ ಸದಸ್ಯರು ಕೂಡ ಬೆಂಬಲಿಸಿದ್ದಾರೆ. ಪಂಚಾಯತ್ ಕಾರ್ಯದರ್ಶಿ ಮಾತ್ರ ಈ ನಿರ್ಧಾರ ವಿರೋಧಿಸಿ ಪತ್ರ ಬರೆದಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ