ಜನೌಷಧಿ ಮಾದರಿಯಲ್ಲೇ ಜಾನುವಾರುಗಳಿಗೆ ‘ಪಶು ಔಷಧಿ’ ಯೋಜನೆ- ಕೇಂದ್ರ ಸರಕಾರ
ಜನೌಷಧಿ ಮಾದರಿಯಲ್ಲೇ ಜಾನುವಾರುಗಳಿಗೆ ‘ಪಶು ಔಷಧಿ’ ಯೋಜನೆ- ಕೇಂದ್ರ ಸರಕಾರ
ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗುವ ಜನೌಷಧಿ ಮಾದರಿಯಲ್ಲೇ ಜಾನುವಾರುಗಳಿಗೆ ‘ಪಶು ಔಷಧಿ’ ಹೆಸರಿನಲ್ಲಿ ಜೆನೆರಿಕ್ ಔಷಧಿ ಬಿಡುಗಡೆ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಯೋಜನೆಗಾಗಿ 2026ರ ಮಾರ್ಚ್ 31ರ ಹೊತ್ತಿಗೆ 75 ಕೋಟಿ ರೂಪಾಯಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ.
ಪಶು ಆರೋಗ್ಯ ಹಾಗೂ ರೋಗ ನಿಯಂತ್ರಣದ ಕಾರ್ಯಕ್ರಮ ಪರಿಷ್ಕರಣೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕಳೆದ ಜನಗಣತಿಯ ಪ್ರಕಾರ 19.25 ಕೋಟಿ ಜಾನುವಾರುಗಳ ಸಂಖ್ಯೆ ಇದೆ.
ಪಶು ವೈದ್ಯಕೀಯ ಔಷಧಿಗಳು ಹಾಗೂ ಮೇವು ಪೂರಕಕ್ಕೆ ಸುಮಾರು ಆರು ಸಾವಿರ ಕೋಟಿಗಳಷ್ಟು ಬಳಕೆ ಮಾಡಲಾಗುತ್ತಿದೆ