ಹಕ್ಕಿ ಜ್ವರ ಎಫೆಕ್ಟ್, ಮೊಟ್ಟೆ ದರ ಇಳಿಕೆ
ಹಕ್ಕಿ ಜ್ವರ ಎಫೆಕ್ಟ್, ಮೊಟ್ಟೆ ದರ ಇಳಿಕೆ
ಬೆಂಗಳೂರು: ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಸುಮಾರು ಫ್ಯಾಕ್ಟರಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೋಳಿಗಳು ಸಾಯುತ್ತಿವೆ.
ಆದರೆ ದರದ ವಿಚಾರಕ್ಕೆ ಬಂದರೆ ಈ ಕಾಯಿಲೆಯ ಎಫೆಕ್ಟ್ ಮೊಟ್ಟೆ ದರದ ಮೇಲಾಗಿದ್ದು, 1ರೂ. ನಿಂದ 1ರೂ.50 ಪೈಸೆ ಇಳಿಕೆಯಾಗಿದೆ. ಚಿಕನ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕದ ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಯಿಲೆ ಕಾಣಿಸಿಕೊಂಡಿದೆ. ಇದು ಸಾರ್ವಜನಿಕರ ಆತಂಕವನ್ನು ಹೆಚ್ಚಿಸಿದ್ದು, ಸಾರ್ವಜನಿಕರು ಚಿಕನ್, ಮೊಟ್ಟೆ ಸೇವನೆಗೆ ಹಿಂದೇಟು ಹಾಕುತ್ತಿದ್ದಾರೆ.