• 27 ಮಾರ್ಚ್ 2025

ಫರಂಗಿಪೇಟೆ: ಪಿಯು ವಿದ್ಯಾರ್ಥಿ ನಾಪತ್ತೆ ಪ್ರಕರಣ: ಪತ್ತೆಗೆ ಏಳು ಪೊಲೀಸ್ ತಂಡ ರಚನೆ

 ಫರಂಗಿಪೇಟೆ: ಪಿಯು ವಿದ್ಯಾರ್ಥಿ ನಾಪತ್ತೆ ಪ್ರಕರಣ: ಪತ್ತೆಗೆ ಏಳು ಪೊಲೀಸ್ ತಂಡ ರಚನೆ
Digiqole Ad

ಫರಂಗಿಪೇಟೆ: ಪಿಯು ವಿದ್ಯಾರ್ಥಿ ನಾಪತ್ತೆ ಪ್ರಕರಣ: ಪತ್ತೆಗೆ ಏಳು ಪೊಲೀಸ್ ತಂಡ ರಚನೆ

ಮಂಗಳೂರಿನಲ್ಲಿ ಕಾಣೆಯಾದ 17 ವರ್ಷದ ವಿದ್ಯಾರ್ಥಿ ಪತ್ತೆಗಾಗಿ ರಾಜ್ಯ ಸರ್ಕಾರ ಏಳು ಪೊಲೀಸ್ ತಂಡಗಳನ್ನು ರಚಿಸಿದೆ.

ದಿಗಂತ್ ಎಂಬ ಪಿಯುಸಿ ವಿದ್ಯಾರ್ಥಿ ಫೆಬ್ರವರಿ 25 ರಿಂದ ನಾಪತ್ತೆಯಾಗಿದ್ದು, ಈ ವಿಚಾರವನ್ನು ಬುಧವಾರ ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಪ್ರಸ್ತಾಪಿಸಿದರು.

ನಾಪತ್ತೆ ಪ್ರಕರಣದ ತನಿಖೆಯನ್ನು ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಿದರು. ಇದಕ್ಕೆ ಗೃಹ ಸಚಿವ ಜಿ. ಪರಮೇಶ್ವರ ಅವರ ಪರವಾಗಿ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ದಿಗಂತ್ ದ್ವಿತೀಯ ಪಿಯುಸಿ ಓದುತ್ತಿದ್ದಾರೆ ಎಂದು ಸದನಕ್ಕೆ ತಿಳಿಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ