• 27 ಮಾರ್ಚ್ 2025

ಬಸ್ ಒಳಗೆ ಮೆಕಾನಿಕ್ ನೇಣಿಗೆ ಶರಣು

 ಬಸ್ ಒಳಗೆ ಮೆಕಾನಿಕ್ ನೇಣಿಗೆ ಶರಣು
Digiqole Ad

ಬಸ್ ಒಳಗೆ ಮೆಕಾನಿಕ್ ನೇಣಿಗೆ ಶರಣು

ಬೆಂಗಳೂರು: KSRTC ಬೆಳಗಾವಿ ಡಿಪೋ ಒಂದರ ಮೆಕಾನಿಕ್ ಬಸ್ಸಿನ ಒಳಗೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೆಕಾನಿಕ್ ಕೇಶವ ಕಮಡೋಳಿ(57) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ತಿಳಿದು ಬಂದಿದೆ.

ಕೇಶವ ಅವರ ಡ್ಯೂಟಿ ಬದಲಿಸದಂತೆ ಡಿಪೋ ಮ್ಯಾನೇಜರ್ ಲಿಂಗರಾಜ ಲಾಠಿ ಅವರು ಸಹಾಯಕ ಕಾರ್ಯ ಅಧೀಕ್ಷಕ ಅನಿಲ್ ಬಾಂದೇಕರ್ ಅವರಿಗೆ ಮನವಿ ಮಾಡಿದ್ದರು, ಆದರೂ ಕೂಡ ಡ್ಯೂಟಿ ಬದಲಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಡ್ಯೂಟಿ ಬದಲಿಸಿದ್ದಕ್ಕೆ ಮತ್ತು ಕೆಲಸದ ಒತ್ತಡ ತಡೆದುಕೊಳ್ಳಲು ಆಗದೆ ಕೇಶವ ಕಮಡೊಳಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳ ವಿರುದ್ಧ ಮೃತ ಕೇಶವ ಕಮಡೊಳಿ ಅವರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ