• 19 ಮಾರ್ಚ್ 2025

ಮನೆಯಲ್ಲಿ ಮಹಿಳೆಯೋರ್ವಳು ಸಶಕ್ತಳಾದರೆ ಇಡೀ ಸಮಾಜ ಶಕ್ತಿಯುತವಾದಂತೆ ಸ್ವಾವಲಂಬನೆ ಜೀವನ ನಡೆಸಿ ಮಹಿಳಾ ದಿನಾಚರಣೆ ಅರ್ಥ ಪೂರ್ಣಗೊಳಿಸಿ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

 ಮನೆಯಲ್ಲಿ ಮಹಿಳೆಯೋರ್ವಳು ಸಶಕ್ತಳಾದರೆ ಇಡೀ ಸಮಾಜ ಶಕ್ತಿಯುತವಾದಂತೆ ಸ್ವಾವಲಂಬನೆ ಜೀವನ ನಡೆಸಿ ಮಹಿಳಾ ದಿನಾಚರಣೆ ಅರ್ಥ ಪೂರ್ಣಗೊಳಿಸಿ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ
Digiqole Ad

ಮನೆಯಲ್ಲಿ ಮಹಿಳೆಯೋರ್ವಳು ಸಶಕ್ತಳಾದರೆ ಇಡೀ ಸಮಾಜ ಶಕ್ತಿಯುತವಾದಂತೆ ಸ್ವಾವಲಂಬನೆ ಜೀವನ ನಡೆಸಿ ಮಹಿಳಾ ದಿನಾಚರಣೆ ಅರ್ಥ ಪೂರ್ಣಗೊಳಿಸಿ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಕಾಣಿಯೂರು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ನುಡಿದರು.

ಮಕ್ಕಳಿಗೆ ಸಂಸ್ಕಾರದ ಪಾಠ ಮಾಡುವವಳು ತಾಯಿ* ಮಕ್ಕಳಿಗೆ ವಿಧ್ಯೆಯ ಜೊತೆ ಆಚಾರ ವಿಚಾರಗಳ ಭೋದನೆ ನೀಡಿ ತಾಯಂದಿರ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ತ್ರಿವೇಣಿ ಬಾಳಿಲ ನುಡಿದರು.

ಕೇಂದ್ರ ಸರಕಾರದ ಯೋಜನೆಗಳ ಕುರಿತಾಗಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಲಕಿತಾ ಶೆಟ್ಟಿ ಮಾಹಿತಿ ನೀಡಿದರು*.

ಅಂಗಾಗ ದಾನ ಅತ್ಯ0ತ ಶ್ರೇಷ್ಠ ದಾನ ಈ ಕಾರ್ಯದಲ್ಲಿ ತೊಡಗುವ ಮೂಲಕ ಇನ್ನೊಂದು ಜೀವವನ್ನು ಉಳಿಸುವ ಕಾರ್ಯ ನಮ್ಮೆಲ್ಲರಿಂದ ಆಗಲಿ ಮತ್ತು ಎಲ್ಲಾ ತಾಯದಿರಿಗೂ ಮಹಿಳಾ ದಿನಾಚರಣೆಯ ಶುಭಾಶಯ ಎಂದು*

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಇಂದಿರಾ ಬಿ. ಕೆ ನುಡಿದರು.

ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಪ್ಯಾರ ಅತ್ಲೇಟಿಕ್ಸ್ ನಲ್ಲಿ ಭಾಗವಹಿಸಿ ಸಾಧನೆ ಮಾಡಿದ ಮುರುಳ್ಯ ಗ್ರಾಮ ಪಂಚಾಯತ್ ಸಿಬ್ಬಂದಿ (ವಿಶೇಷ ಚೇತನರ ಪುನರ್ವಸತಿ ಕಾರ್ಯಕರ್ತೆ ) ರಂಜಿನಿ ಇವರನ್ನು ಗೌರವಿಸಲಾಯಿತು.

ಮಹಿಳಾ ಮೋರ್ಚಾದ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವ ಮಂಡಲದ ಉಪಾಧ್ಯಕ್ಷರಾದ ಗಣೇಶ್ ಉದನಡ್ಕ ಇವರಿಗೆ ಶಾಲು ನೀಡಿ ಗುರುತಿಸಲಾಯಿತು.

ಮಂಡಲ ಮಹಿಳಾ ಮೋರ್ಚಾ ಕಾರ್ಯದರ್ಶಿಆಶಾ ರೈ ಕಲಾಯಿ ಕಾರ್ಯಕ್ರಮ ನಿರೂಪಿಸಿದರು.ತೇಜ ಕುಮಾರಿ ಧನ್ಯವಾದ ನೀಡಿದರು.

ಸುಳ್ಯ ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಕಾಣಿಯೂರು ಹಾಗೂ ಸವಣೂರು ಮುರುಳ್ಯ ಗ್ರಾಮ ಪಂಚಾಯತ್ ಸದಸ್ಯರು ಗಳು ಮತ್ತು ಮಹಿಳಾ ಮೋರ್ಚಾ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Digiqole Ad

ಈ ಸುದ್ದಿಗಳನ್ನೂ ಓದಿ