• 22 ಮಾರ್ಚ್ 2025

ಇನ್ಮುಂದೆ ಸರಕಾರಿ ವೈದ್ಯರಿಗೆ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಡ್ಯೂಟಿ ಕಡ್ಡಾಯ

 ಇನ್ಮುಂದೆ ಸರಕಾರಿ ವೈದ್ಯರಿಗೆ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಡ್ಯೂಟಿ ಕಡ್ಡಾಯ
Digiqole Ad

ಇನ್ಮುಂದೆ ಸರಕಾರಿ ವೈದ್ಯರಿಗೆ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಡ್ಯೂಟಿ ಕಡ್ಡಾಯ

ಬೆಂಗಳೂರು: ಸರಕಾರಿ ಆಸ್ಪತ್ರೆ ವೈದ್ಯರು ಇನ್ನುಮುಂದೆ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಕಡ್ಡಾಯವಾಗಿ ಕಾರ್ಯ ನಿರ್ವಹಿಸಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಪರಿಷತ್ ನಲ್ಲಿ ಮಾತನಾಡಿ ಅವರು, ಸರಕಾರಿ ವೈದ್ಯರು ತಮ್ಮ ಡ್ಯೂಟಿ ಅವಧಿಯಲ್ಲಿ ಬೇರೆಡೆ ಕೆಲಸ ಮಾಡುತ್ತಿರುವ ಆರೋಪ ಇದೆ,ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಮಾಡಿದ್ದು ನಿಗದಿತ ಅವಧಿಯಲ್ಲಿ ಆಸ್ಪತ್ರೆಯಲ್ಲೇ ಇದ್ದು ಬೆಳಗ್ಗೆ 9, ಮಧ್ಯಾಹ್ನ 2,3 ಮತ್ತು 4 ಗಂಟೆಗೆ ಬಯೋಮೆಟ್ರಿಕ್ ಮಾಡಬೇಕು. ನಿಯಮ ಉಲ್ಲಂಘನೆ ಮಾಡುವ ವೈದ್ಯರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.

Digiqole Ad

ಈ ಸುದ್ದಿಗಳನ್ನೂ ಓದಿ