ಮೀನು ಪ್ರಿಯರಿಗೆ ಶಾಕ್!
ಮೀನು ಪ್ರಿಯರಿಗೆ ಶಾಕ್!
ಬೆಂಗಳೂರು: ಚಿಕನ್, ಮಟನ್ ಬಿಟ್ಟು ಮೀನು ತಿನ್ನುವವರಿಗೆ ಇದೀಗ ದರ ಏರಿಕೆಯ ಶಾಕ್ ತಟ್ಟಿದೆ. ಬೆಂಗಳೂರಿನಲ್ಲಿ ಮೀನಿನ ಬೆಲೆಯಲ್ಲಿ ಶೇಕಡ 30ರಷ್ಟು ಏರಿಕೆ ಆಗಿದೆ. ಬೇಡಿಕೆಗೆ ತಕ್ಕಷ್ಟು ಮೀನು ಆರೈಕೆ ಆಗದ ಹಿನ್ನೆಲೆ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಹಕ್ಕಿ ಜ್ವರದ ಪರಿಣಾಮ ಕೋಳಿ ಮಾಂಸ ಸಿಗುತ್ತಿಲ್ಲ, ಸಿಕ್ಕಿದರೂ ಅನೇಕರು ರೋಗ ಭೀತಿಯಿಂದ ಅದನ್ನು ಖರೀದಿ ಮಾಡುತ್ತಿಲ್ಲ. ಮತ್ತೊಂದೆಡೆ, ಮಟನ್ ದುಬಾರಿ ಆಗಿದೆ. ಈ ಎಲ್ಲಾ ಕಾರಣಗಳಿಂದ ಮೀನಿನ ಬೇಡಿಕೆ ಹೆಚ್ಚಾಗಿದ್ದು,ಇದರ ಬೆನ್ನಲ್ಲೇ ಮೀನಿನ ದರ ಕೂಡ ದುಬಾರಿಯಾಗಿದೆ.