ಕನ್ನಡ ಭವನ ರೂವಾರಿ ಡಾ. ವಾಮನ್ ರಾವ್ -ಸಂದ್ಯಾ ರಾಣಿ ದಂಪತಿಗೆ ಡಿ. ಬಿ. ಟಿ. ಎ ಗೌರವ ಪ್ರಶಸ್ತಿ.
ಕನ್ನಡ ಭವನ ರೂವಾರಿ ಡಾ. ವಾಮನ್ ರಾವ್ -ಸಂದ್ಯಾ ರಾಣಿ ದಂಪತಿಗೆ ಡಿ. ಬಿ. ಟಿ. ಎ ಗೌರವ ಪ್ರಶಸ್ತಿ
ಕಾಸರಗೋಡು :ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಸಭಾ ವೇದಿಕೆಯಲ್ಲಿ, ದ್ರಾವಿಡ ಭಾಷಾ ಟ್ರಾನ್ಸ್ಲೇಷನ್ ಅಸೋಸಿಯೇಷನ್(ರಿ.)ಬೆಂಗಳೂರು ಮತ್ತು ಕನ್ನಡ ಭವನ ಸಂಯುಕ್ತ ಆಯೋಜನೆಯಲ್ಲಿ ನಡೆದ ಮಲಯಾಳಂ -ಕನ್ನಡ ಅನುವಾದ ಕಾರ್ಯಾಗಾರ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ದಲ್ಲಿ ಡಿ. ಬಿ. ಟಿ. ಎ. ಸಂಸ್ಥೆಯ ವತಿಯಿಂದ ಕಾಸರಗೋಡಿನಲ್ಲಿ ಕಳೆದ 24ವರ್ಷಗಳಿಂದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವ ಪ್ರತಿಜ್ಞಾ ಬದ್ದವಾದ ವಿವಿಧ ವಿಶಿಷ್ಟ ಕನ್ನಡಪರ ಕಾರ್ಯಕ್ರಮ ಮೂಲಕ ಇವರು ನಡೆಸುತ್ತಿರುವ ನಾಡ ನುಡಿಯ ಸೇವೆಯನ್ನು ಮಾನಿಸಿ ಇವರನ್ನು ಗೌರವಿಸಿ, ಸನ್ಮಾನ ಪ್ರಶಸ್ತಿ ಯನ್ನು ನೀಡಲಾಯಿತು. ಇವರು ನಡೆಸುತ್ತಿರುವ ಗ್ರಂಥಾಲಯ, ಸಾರ್ವಜನಿಕ ವಾಚನಾಲಯ ಸೇವೆ, “ಉಚಿತ ವಸತಿ ಸೌಕರ್ಯ “ಪುಸ್ತಕ ಪ್ರಕಾಶನ, ಮತ್ತಿತರರು ಕನ್ನಡ ಪರ ಸೇವೆಯನ್ನು ಕುರಿತು ಸಂಸ್ಥೆ ಹೆಮ್ಮೆ ವ್ಯಕ್ತ ಪಡಿಸಿತು. ಡಿ. ಬಿ. ಟಿ. ಎ. ಅಧ್ಯಕ್ಷೆ ಡಾ. ಸುಷ್ಮಾ ಶಂಕರ್, ಉಪಾಧ್ಯಕ್ಷ ಕುಪ್ಪಮ್ ಯೂನಿವರ್ಸಿಟಿ ಪ್ರೋ. ಡಾ. ಬಿ. ಎಸ್. ಶಿವಕುಮಾರ್, ಕಾರ್ಯದರ್ಶಿ ಡಾ ರಾಕೇಶ್ ಸನ್ಮಾನ, ಪ್ರಶಸ್ತಿ ನೀಡಿದರು. ಈ ಕಾರ್ಯಕ್ರಮ ದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ. ವಿ. ಕುಮಾರನ್ ಮಾಸ್ಟರ್, ಕನ್ನಡ ಪತ್ರಕರ್ತ ಸಂಘ ಅಧ್ಯಕ್ಷ ರವಿ ನಯ್ಕಾಪು ಡಾ. ವೆಂಕಟ್ರಮಣ ಹೊಳ್ಳ, ಬಿ. ಟಿ ಜಯರಾಮ್ ಉದುಮ, ಮಲಯಾಳಂ ಕವಿ, ಸಾಹಿತಿ ರವೀಂದ್ರನ್ ಪಾಡಿ, ಮುಂತಾದವರಿದ್ದರು.”ಡಿ. ಬಿ. ಟಿ. ಎ. ಸಾಧನಾ ಸನ್ಮಾನ್ ಪ್ರಶಸ್ತಿ 2025.”ಸ್ವೀಕರಿಸಿದ ವಾಮನ್ ರಾವ್ -ಸಂದ್ಯಾ ರಾಣಿ ಟೀಚರ್, ಅಭಿನಂದನೆ, ಸನ್ಮಾನ, ಪ್ರಶಸ್ತಿ ಗಳು ಹೆಚ್ಚಿನ ಪ್ರೇರಣೆ ನೀಡುತ್ತದೆ, ಎಂದು ಹೇಳಿದರು. ಕನ್ನಡ ಭವನ ಗೌರವ ಅಧ್ಯಕ್ಷ ಪತ್ರಕರ್ತ ಪ್ರದೀಪ್ ಬೇಕಲ್ ಸ್ವಾಗತಿಸಿ, ಡಾ. ರಾಕೇಶ್ ಕಾರ್ಯಕ್ರಮ ನಿರ್ವಹಿಸಿ, ಕನ್ನಡ ಭವನ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೋಟೆಕಣಿ ವಂದಿಸಿದರು.