• 27 ಮಾರ್ಚ್ 2025

ಒಂದೇ ಫಾರಂನಲ್ಲಿ ಮೂರು ಸಾವಿರ ಕೋಳಿಗಳ ಸಾವು!

 ಒಂದೇ ಫಾರಂನಲ್ಲಿ ಮೂರು ಸಾವಿರ ಕೋಳಿಗಳ ಸಾವು!
Digiqole Ad

ಒಂದೇ ಫಾರಂನಲ್ಲಿ ಮೂರು ಸಾವಿರ ಕೋಳಿಗಳ ಸಾವು!

ವಿಜಯನಗರ: ವಿಜಯನಗರ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಬಳಿಯ ಖಂಡಿಕೇರಿ ತಾಂಡಾ ನಿವಾಸಿ ಪರಮೇಶ್ ನಾಯ್ಕ್ ಎಂಬವರಿಗೆ ಸೇರಿದ ಕೋಳಿ ಫಾರಂನಲ್ಲಿ ಮೂರು ಸಾವಿರ ಕೋಳಿಗಳು ಮೃತಪಟ್ಟಿರುವ ಘಟನೆ ನಡೆದಿದೆ. ವಿಚಾರ ತಿಳಿದು ಸ್ಥಳಕ್ಕೆ ತಜ್ಞ ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೋಳಿಗಳ ಮಾದರಿ ಸಂಗ್ರಹಿಸಿದ್ದಾರೆ. ಹಕ್ಕಿ ಜ್ವರದ ಲಕ್ಷಣ ಕಂಡುಬಂದಿಲ್ಲ,ಕೋಳಿಗಳು ವಿಷಪೂರಿತ ಆಹಾರ ಸೇವಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕೋಳಿಗಳ ಮಾದರಿ ಸಂಗ್ರಹಿಸಲಾಗಿದ್ದು, ಕೋಳಿಗಳ ಸಾವಿಗೆ ಕಾರಣ ಪತ್ತೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಪರಮೇಶ್ ನಾಯ್ಕ್ ಮೂರು ತಿಂಗಳ ಹಿಂದೆಯಷ್ಟೇ ಫಾರಂ ಆರಂಭಿಸಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ